Header Ads
Breaking News

ಫೆ.28ರಂದು ಉಡುಪಿಯಲ್ಲಿ ಜಾನಪದ ಉತ್ಸವ : ಪ್ರದರ್ಶನಗೊಳ್ಳಲಿದೆ ವಿವಿಧ ಜನಪದ ಕಲಾ ಪ್ರಕಾರ

ಕರ್ನಾಟಕ ಜನಪದ ಅಕಾಡಮಿ ಬೆಂಗಳೂರು ಇದರ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಟಾನ ಉಡುಪಿ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ ಉಡುಪಿ ಇದರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿವಿಧ ಜನಪದ ಪ್ರಕಾರಗಳ ತರಭೇತಿ ಶಿಬಿರವು ಕಲಿಸಿಕೊಡಲಾಗುತ್ತಿದ್ದು ಇದರ ಪ್ರದರ್ಶನ ಕಾರ್ಯಕ್ರಮ ಫೆ.28ರಂದು ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಜನಪದ ಅಕಾಡಮಿಯ ಅದ್ಯಕ್ಷರಾದ ಮಾತಾ ಬಿ ಮಂಜಮ್ಮ ಜೋಗತಿಯವರು ಮಾಹಿತಿ ನೀಡಿದರು. ರಾಜ್ಯದ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಎಪ್ಪತ್ತೈದಕ್ಕೂ ಅಧಿಕ ಮಂದಿಗೆ ವಿವಿಧ ಜನಪದ ಕಲಾ ಪ್ರಕಾರಗಳಾದ ಡೊಳ್ಳು ಕಿಣಿತ, ಕೊರಗರ ಡೋಲು, ಸಿದ್ದಿ ಡಮಾಮಿ ನೃತ್ಯ, ಕಂಗಿಲು, ಮಲ್ಲಕಂಬ ಇತ್ಯಾದಿ ಜನಪದ ಕಲಾ ಪ್ರಕಾರವನ್ನು ಕಲಿಸಿಕೊಡಲಾಗುತ್ತಿದ್ದು ಇದರ ಪ್ರದರ್ಶನ ಜನಪದ ಉತ್ಸವ ಫೆ. 28ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿಭಟ್, ಸಾಹಿತಿ ಡಾ. ವೈದೇಹಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *