Header Ads
Header Ads
Breaking News

ಫೆ.3ರಂದು ಸುಳ್ಯದಲ್ಲಿ ಮ್ಯಾಟ್ ಪ್ರೋ ಮಾದರಿ ಪಂದ್ಯಾಟ ಕಬಡ್ಡಿ

ಆರ್.ಬಿ. ಫ್ರೆಂಡ್ಸ್ ಪೈಚಾರ್ ಇದರ ಆಶ್ರಯದಲ್ಲಿ ಸುಳ್ಯದ ಜೆಒಸಿ ಮೈದಾನದಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 8ತಂಡಗಳ ಪ್ರೊ ಮಾದರಿಯ ಹೊನಲು ಬೆಳಕಿನ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾ ಹಾಗೂ ಸನ್ಮಾನ ಕಾರ್ಯಕ್ರಮ 2019ರ ಫೆಬ್ರವರಿ 3ರಂದು ನಡೆಯಲಿದೆ ಎಂದು ಆರ್‌ಬಿ ಫ್ರೆಂಡ್ ಪೈಚಾರ್ ಅಧ್ಯಕ್ಷ ಆರ್.ಬಿ. ಬಶೀರ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 8 ತಂಡಗಳನ್ನು ಮಾಡಿ ಪಂದ್ಯಾಟವನ್ನು ನಡೆಸಲಿವೆ.

ಇದಕ್ಕಾಗಿ ಸುಳ್ಯ ತಾಲೂಕಿನಿಂದ ಸುಮಾರು10, ದ.ಕ.ಜಿಲ್ಲೆಯಿಂದ 42, ಹಾಗೂ ಉಡುಪಿ ಜಿಲ್ಲೆಯಿಂದ 20ಮಂದಿ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಆಡಲು ಇಚ್ಛಿಸುವ ಕ್ರೀಡಾ ಪಟುಗಳು ತಮ್ಮ ಭಾವಚಿತ್ರ, ಐಡಿಕಾರ್ಡ್ ಮತ್ತು ದೂರವಾಣಿ ಸಂಖ್ಯೆಯನ್ನು ನವಂಬರ್ ೩೦ರ ಮುಂಚಿತವಾಗಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಕರೋಡಿ, ನಾಸಿರ್ ಕೆ.ಪಿ., ರಫೀಕ್ ಪೈಚಾರ್, ಸಿರಾಜ್ ಎಸ್.ಪಿ. ಉಪಸ್ಥಿತರಿದ್ದರು. 

Related posts

Leave a Reply