Header Ads
Header Ads
Breaking News

ಫೆ.3 ರಂದು ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ 100ನೇ ರಕ್ತದಾನ ಶಿಬಿರ

ಬಂಟ್ವಾಳ: ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಒದಗಿಸುವ ನಿಟ್ಟಿನಲ್ಲಿ 23 ವರ್ಷಗಳ ಹಿಂದೆ ಆರಂಭಗೊಂಡಿದ್ದ ಸೇವಾಂಜಲಿ ಪ್ರತಿಷ್ಠಾನದ ರಕ್ತದಾನ ಶಿಬಿರ ಇದೀಗ ನೂರನೇ ರಕ್ತದಾನ ಶಿಬಿರದತ್ತ ಪಾದಾರ್ಪಣೆಗೈಯ್ಯುತ್ತಿದ್ದು ಜಿಲ್ಲೆಯಲ್ಲಿ ದಾಖಲೆ ಸಂಖ್ಯೆಯ ರಕ್ತದಾನ ಶಿಬಿರವನ್ನು ಸಂಘಟಿಸಿದ ಕೀರ್ತಿಗೆ ಪಾತ್ರವಾಗಲಿದೆ.
ನೂರನೇ ಶಿಬಿರ ಫೆ.3 ರಂದು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅತಿಥಿಗಳಾಗಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ದೇವದಾಸ್ ಹೆಗ್ಡೆ ಆಗಮಿಸಲಿದ್ದಾರೆ. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ವಿ4 ನ್ಯೂಸ್‌ನೊಂದಿಗೆ ಮಾತನಾಡಿ, ಈ ಬಾರಿಯ ಶಿಬಿರದಲ್ಲಿ 150 ಯುನಿಟ್‌ಗಿಂತಲೂ ಅಧಿಕ ರಕ್ತಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Related posts

Leave a Reply