Header Ads
Header Ads
Breaking News

ಫೆ.5ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ದೇಶಿ ದುಲಹನ್ ಫ್ಯಾಶನ್ ಶೋ ಕಾರ್ಯಕ್ರಮ

ದೇಶಿ ದುಲಹನ್ ಫ್ಯಾಶನ್ ಶೋ ಕಾರ್ಯಕ್ರಮವನ್ನು ಲಯನ್ಸ್, ಲಯನೆಸ್, ಲಿಯೋ ಕ್ಲಬ್ ಮಂಗಳೂರು ಮತ್ತು ಚೇತನಾಸ್ ಬ್ಯೂಟಿ ಲಾಂಜ್ ವತಿಯಿಂದ ಆಯೋಜಿಸಲಾಗುತ್ತಿದ್ದು, ದೇಶದ ಸಂಸ್ಕøತಿಯನ್ನು ವಿವಿಧತೆಯನ್ನು ಪ್ರಸಾರಿಸುವಂತಹ ಕಾರ್ಯಕ್ರಮವಾಗಿದೆ. ಫೆ.5ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಜಯ ವಿಶ್ವೆಶ್ವರಯ್ಯ ಅವರು, ಭಾರತ ದೇಶದ ವಿವಿಧ ಜಾತಿ, ಮತ, ಹಾಗೂ ರಾಜ್ಯಗಳ ಸಾಂಪ್ರಾಯಿಕ ವಧುವಿನ ವಿವಾಹ ಅಲಂಕಾರವನ್ನು ಪ್ರದರ್ಶಿಸಲಾಗುವುದು ಈ ಮೂಲಕ ನಮ್ಮ ದೇಶದ ವಿವಿಧ ಆಚಾರ ವಿಚಾರಗಳನ್ನು ಸಮಾಜಕ್ಕೆ ಅರಿವು ಮೂಡಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನನು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317-ಡಿ ಇದರ ಪ್ರಥಮ ಮಹಿಳಾ ಸುಖಲತಾ ಭಂಡಾರಿಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಿನಿಮಾ ತಾರೆ ಕರೀಷ್ಮಾ ಅಮೀನ್ ಹಾಗೂ ಇನ್ನೋರ್ವ ಅತಿಥಿಯಾಗಿ ಲಯನ್ಸ್ ಜಿಲ್ಲೆಯ 317-ಡಿ ಇದರ ಮಹಿಳಾ ಲಯನ್ಸ್ ರಾಯಭಾರಿ ಇಂದಿರಾ ಶೆಟ್ಟಿಯವರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚೇತನ, ಜ್ಯೋತಿ ಶೆಟ್ಟಿ, ಹೇಮ ರಾಮ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply