Header Ads
Header Ads
Breaking News

ಫೆ.6 ಮತ್ತು 7ರಂದು ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವದ ದೈವಸ್ಥಾನ ಶ್ರೀ ನಾಗ ಸಾನಿಧ್ಯ ಮತ್ತು ಗುಳಿಗನ ಕಟ್ಟೆ ಪುನರ್ ನಿರ್ಮಾಣ ಕಾರ್ಯಕ್ರಮ

ವಿಟ್ಲ: ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂಪಾಡಿ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ ಕಟ್ಟೆಗಳು 50 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದೆ. ಇನ್ನು ಫೆ.6 ಮತ್ತು ಫೆ.7ರಂದು ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ ತಿಳಿಸಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇದು ಪ್ರಾಚೀನ ದೈವಸ್ಥಾನಗಳಲ್ಲೊಂದು. ವಿಟ್ಲ ಸೀಮೆಯೆಂದು ಕರೆಯಲ್ಪಡುವ 19 ಗ್ರಾಮಗಳನ್ನು ಹೆಚ್ಚಿನ ಮಟ್ಟಿಗೆ ಸ್ವತಂತ್ರವಾಗಿ ಆಳುತ್ತಿದ್ದ ರಾಜವಂಶ, ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲ ಸೀಮೆಯಲ್ಲಿ 16 ದೈವ – ದೈವಸ್ಥಾನಗಳನ್ನು ನಡೆಸಿಕೊಂಡು ಬಂದಿತ್ತು ಎಂದು ವಿವರಿಸಿದರು.

ಕಾರ್ಯಾಧ್ಯಕ್ಷ ಬಾಬು ಕೆ.ವಿ. ಅವರು ಮಾತನಾಡಿ, ಫೆ.6ರಂದು ಸಂಜೆ 5 ಗಂಟೆಗೆ ತಂತ್ರಿಯವರು ಆಗಮಿಸಿ, ದೈವದ ಪೀಠದ ಜಲಾಧಿವಾಸಕ್ರಿಯೆ, ಆಚಾರ್ಯವರಣ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ ನೆರವೇರಿಸಲಿದ್ದಾರೆ. ಫೆ.7ಕ್ಕೆ ರಾತ್ರಿ 8.30ರಿಂದ ಧರ್ಮಸಭೆ ನಡೆಯಲಿದ್ದು, ಗೌರವಾಧ್ಯಕ್ಷ-ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಬಾಬು ಕೆ.ವಿ, ಉಪಾಧ್ಯಕ್ಷ ಲಕ್ಷ್ಮಣ ಆರ್.ಎಸ್., ವಿಟ್ಲ ಅರಮನೆಯ ಶ್ರೀಕಂಠ ವರ್ಮ, ಸದಸ್ಯ ರವಿ ವರ್ಮ, ಕಾಶಿಮಠ ಶ್ರೀ ಕಾಶಿ ಯುವಕ ಮಂಡಲ ಅಧ್ಯಕ್ಷ ಕೇಶವ ವಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply