Header Ads
Header Ads
Breaking News

ಫೆ.7ರಿಂದ 17ರ ವರೆಗೆ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉರೂಸ್ ಮುಬಾರಕ್

ವಿಟ್ಲ: ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ರಹ್ಮಾನಿಯ ಜುಮಾ ಮಸೀದಿ ಅಧೀನದಲ್ಲಿರುವ ಪಶ್ಚಿಮ ಭಾಗದಲ್ಲಿ ಶತಮಾನದಿಂದಲೂ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಅವರ ಉರೂಸ್ ಮುಬಾರಕ್ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ಸುಸಜ್ಜಿತ ದರ್ಗಾ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ.ಉರೂಸ್ ಸಮಾರಂಭ ಫೆ.7ರಿಂದ 17ರ ವರೆಗೆ ಖಾಝಿ ಕೂರ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು, ಊರಿಯ ಯುವಕರು ಹಗಳಿರುಳು ಉರೂಸ್ ಯಶಸ್ಸಿವಿಗೆ ಶ್ರಮಿಸುತ್ತಿದ್ದಾರೆ. ಇದೀಗ ಮಸೀದಿ ಹಾಗೂ ನೂತನ ದರ್ಗಾ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಉರೂಸ್ ಸಮಾರಂಭದ ಸಿದ್ಧತೆಗಳು ಹಂತಿಮ ಹಂತದಲ್ಲಿದೆ.ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಅವರು ಸಯ್ಯದ್ ಕುಟುಂಬಕ್ಕೆ ಸೇರಿದವರು. ನೂರಾರು ವರ್ಷಗಳ ಹಿಂದೆ ಇಲ್ಲಿ ಹನಫಿ ಬಾಂಧವರು ವಾಸಿಸುತ್ತಿದ್ದರು. ಹಲವು ಕುಟುಂಬದ ಮನೆಗಳಿದ್ದವು. ಅವರ ಪರಂಪರೆಯಿಂದ ನೆಲೆಯಾಗಿದೆ. ದರ್ಗಾ ಹಲವು ಪವಾಢಗಳನ್ನು ಸೃಷ್ಟಿಸಿದೆ. ಪ್ರತಿಯೊಬ್ಬರು ಪ್ರತಿಫಲವನ್ನು ಪಡೆದುಕೊಂಡಿದೆ.ಇಬ್ರಾಹೀಂ ಷಾಪ್ರತಿ ಮೂರು ವರ್ಷಕ್ಕೊಮ್ಮೆ ಉರೂಸ್ ಮುಬಾರಕ್ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಅಂದರೆ 2016ರಲ್ಲಿ ಮಖಾಂನ ಹಳೆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ನೂತನ ಕಟ್ಟಡಕ್ಕೆ ಕೂರ ತಂಙಳ್ ಅವರು ಶಿಲಾನ್ಯಾಸ ನಡೆಸಿದ್ದರು. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಸಲಾಗಿದೆ. ಬರೋಬ್ಬರಿ 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಇದೀಗ ಫೆ.7ರಿಂದ 17ರ ವರೆಗೆ ಉರೂಸ್ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರಾರಂಭದ ದಿನ ಅಂದರೆ ಫೆ. 7 ರಂದು ನೂತನ ದರ್ಗಾ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭ ಧಾರ್ಮಿಕ ಪಂಡಿತರು, ಉಲಮಾ, ಉಮರಾಗಳು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

Related posts

Leave a Reply