Header Ads
Header Ads
Breaking News

ಫೆ. 7ರಿಂದ 9ರವರೆಗೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಲೋಶಿಯನ್ ಫೆಸ್ಟ್ 2019

ಸಂತ ಅಲೋಶಿಯಸ್ ಕಾಲೇಜಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ  ಮತ್ತು ಶೈಕ್ಷಣಿಕ ಉತ್ಸವ ಅಲೋಶಿಯನ್ ಫೆಸ್ಟ್ 2019 ಫೆಬ್ರವರಿ 7 ರಿಂದ 9ರವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಅಲೋಶಿಯನ್ ಫೆಸ್ಟ್‍ನಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ತಾರೆ ಎಸ್ತೆರ್ ನೊರೊನ್ಹಾರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕುರಿತು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರಾಂಶುಪಾಲರಾದ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ರವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆವರೆಂಡ್ ಫಾದರ್ ಡಯನೀಶಿಯಸ್ ವಾಜ್ ಎಸ್ ಜೆ ವಹಿಸಲಿದ್ದಾರೆ.

ರಾಷ್ಟ್ರಮಟ್ಟದ ಸಾಂಸ್ಕೃತಿಕ  ಮತ್ತು ಶೈಕ್ಷಣಿಕ ಉತ್ಸವ ಅಲೋಶಿಯನ್ ಫೆಸ್ಟ್ 2019 ಮೂರು ದಿನಗಳ ಕಾಲ ನಡೆಯಲಿದ್ದು, ಕಲಾ ವಿಭಾಗದಲ್ಲಿ ಆರ್ಟ್‍ಬೀಟ್, ವಾಣಿಜ್ಯ ವಿಭಾಗದಲ್ಲಿ ಆಕ್ಮೆ, ವ್ಯವಹಾರ ನಿರ್ವಹಣಾ ವಿಭಾಗದಲ್ಲಿ ಸ್ಪಿನ್ ಔಟ್, ವಿಜ್ಞಾನ ವಿಭಾಗದ ಇಂಪ್ರಿಂಟ್ಸ್ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಕಾಂಪೋಸಿಟ್ ಎನ್ನುವ ಪ್ರತ್ಯೇಕ ಉತ್ಸವವನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳಾಗಿ ಆಯೋಜಿಸಲಾಗಿದೆ. ಇನ್ನು ಅಸ್ತಿತ್ವ ಎನ್ನುವ ಸಾಂಸ್ಕೃತಿಕ  ಉತ್ಸವ, ಅಲೋಶ್ಯಾಡ್ ಆಟೋಟ ಉತ್ಸವಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಲೋಶಿಯನ್ ಫೆಸ್ಟ್ 2019 ರ ಸಮಾರೋಪ ಸಮಾರಂಭವು ಫೆಬ್ರವರಿ 9 ರಂದು ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ನಾಗರಾಜ ರಾವ್ ಬಿ ಉಪಸ್ಥಿತರಿರುವರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸ್ಟಾಪ್ ಕಾ ಅರ್ಡಿನೆಟರ್ ಡಾ. ನಾರಾಯಣ್ ಭಟ್, ಡಾ. ರತನ್ ತಿಲಕ್ ಮೊಹಂತ, ರೆಲ್ಸನ್ ಲೋಬೊ ಉಪಸ್ಥಿತರಿದ್ದರು

Related posts

Leave a Reply