Header Ads
Header Ads
Breaking News

ಫೆ.9ರಿಂದ 16ರ ವರೆಗೆ ಅಲೋಶಿಯಸ್ ಸಾಹಿತ್ಯ ಸಮ್ಮೇಳನ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲೀಷ್ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಅಲೋಶಿಯಸ್ ಸಾಹಿತ್ಯ ಸಮ್ಮೇಳನವು ಫೆಬ್ರವರಿ 9ರಿಂದ 16 ರವರೆಗೆ ಎಂಟು ದಿನಗಳ ಕಾಲ ನಡೆಯಲಿದೆ ಎಂದು ಡಾ. ಲೋಬಿಯಾ ಮೆಂಡೋನ್ಸಾ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಮ್ಮೇಳನದ ಉದ್ಘಾಟನೆಯನ್ನು ಫೆಬ್ರವರಿ 9ರಂದು ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ವಂದನೀಯ ಗುರುಗಳಾದ ಫಾದರ್ ಡೈನೀಸಿಯಸ್ ವಾಜ್ ಎಸ್.ಜೆ. ಅವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಪ್ರವೀಣ್ ಮಾರ್ಟೀಸ್ ಅವರು ನಡೆಸಿಕೊಡಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಆಭಯಸಿಂಹ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಮ್ಮೇಳನದಲ್ಲಿ ಫೆಬ್ರವರಿ 9ರಿಂದ 10ರ ವರೆಗೆ ಚಲಚಿತ್ರ ರಸಗ್ರಹಣ ಶಿಬಿರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಅಭಯ ಸಿಂಹ ಅವರು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಆನಂತರ ಡಾ. ಸರಸ್ವತಿ ಅವರು ಮಾತನಾಡಿ, ಫೆಬ್ರವರಿ 9ರಂದು ಸೇತುಬಂಧನ ನಾಟಕವು ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 10ರಂದು ಶಕ್ತಿಭದ್ರ ವಿರಚಿತ ವೆಂಕಟ್ರಮಣ ಐತಾಳದಿಂದ ಅನುವಾದಗೊಂಡ ಜೋಸೆಫ್ ಜಾನ್ ರವರು ನಿರ್ದೇಶಿಸಿದ ಆಶ್ವರ್ಯ ಚೂಡಾಮಣಿ ನಾಟಕ ಪ್ರದರ್ಶನಗೊಳ್ಳಲಿದೆ ಈ ಎರಡೂ ನಾಟಕಗಳು ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ ಎಂದ ಅವರು ಪರಿಸರ ಮತ್ತು ಸಾಹಿತ್ಯ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಹೇಳಿದರು
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಪ್ರವೀಣ್ ಮಾರ್ಟೀಸ್, ಡಾ. ಗಿರೀಶ್, ಚಂದ್ರಕಲಾ ಉಪಸ್ಥಿತರಿದ್ದರು.

Related posts

Leave a Reply