Breaking News

ಫೇಸ್‌ಬುಕ್ ಅವಹೇಳನಕಾರಿ ಬರಹ ಪೇಜ್ ಶೇರ್ : ಯುವಕಗೆ ಹಲ್ಲೆ ದೂರು

ಮೂಡುಬಿದಿರೆ: ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿ ಬರಹಗಳಿದ್ದ ಫೇಸ್‌ಬುಕ್ ಪೇಜನ್ನು ಶೇರ್ ಮಾಡಿದ ಕಲ್ಲಮುಂಡ್ಕೂರಿನ ಯುವಕನಿಗೆ ಹಲ್ಲೆ ನಡೆಸಿದ ಮೂಡುಬಿದಿರೆ ಯುವ ಕಾಂಗ್ರೆಸ್ ಅಧ್ಯಕ್ಷ ಸಹಿತ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.

ಹಲ್ಲೆಗೊಳಗಾದ ಯುವಕ ಕಲ್ಲಮುಂಡ್ಕೂರಿನ ಗ್ಲೆನ್ ವಿಶಾಲ್ ಡಿಸಿಲ್ವ(೨೧)ಎಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪುನರಾಯ್ಕೆಯಾಗಿರುವುದಕ್ಕೆ ’ಕಾಂಗ್ರೆಸ್ ಮುಕ್ತ ಮೂಡುಬಿದಿರೆ’ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ವಿರೋಧ ವ್ಯಕ್ತವಾಗಿದ್ದು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಅನೇಕ ಬರಹಗಳನ್ನು ಕೂಡ ಇದರಲ್ಲಿ ಬರೆಯಲಾಗಿತ್ತು. ಈ ಪೇಜನ್ನು ಗ್ಲೆನ್ ಇತರರಿಗೆ ಶೇರ್ ಮಾಡಿದ್ದ ಎನ್ನಲಾಗಿದೆ.
ಈ ಕಾರಣಕ್ಕಾಗಿ ಮಂಗಳವಾರ ಬೆಳಿಗ್ಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್, ಕಾಂಗ್ರೆಸ್ ಕಾರ‍್ಯಕರ್ತರಾದ ಸಚಿನ್ ಸಾಲ್ಯಾನ್ ಮತ್ತು ಎಸ್.ಕೆ ಸನಿಲ್ ಮಂಗಳವಾರ ಬೆಳಿಗ್ಗೆ ಗ್ಲೆನ್ ಡಿಸಿಲ್ವ ಅವರಿಗೆ ಕಲ್ಲಮುಂಡ್ಕೂರಿನಲ್ಲಿರುವ ಅವರ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಬಗ್ಗೆ ಗ್ಲೆನ್ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರತಿ ದೂರು : ಫೇಸ್ ಬುಕ್‌ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆದು ಅದನ್ನು ಇತರರಿಗೆ ಶೇರ್ ಮಾಡಿದನ್ನು ಪ್ರಶ್ನಿಸಿದಕ್ಕೆ ಗ್ಲೆನ್ ಡಿಸಿಲ್ವ ನನಗೆ ಹಲ್ಲೆ ನಡೆಸಿದ್ದಾರೆಂದು ಚಂದ್ರಹಾಸ್ ಸನಿಲ್ ಮೂಡುಬಿದಿರೆ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ. ಎರಡೂ ಕಡೆಯ ದೂರುಗಳನ್ನು ಪೊಲೀಸರು ಸ್ವೀಕರಿಸಿದ್ದು ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ ಕೋರಿದ್ದಾರೆ.

Related posts

Leave a Reply