Header Ads
Header Ads
Breaking News

ಫೋನ್ ಕದ್ದಾಲಿಕೆ ಪ್ರಕರಣ- ಇಂಟರ್‍ನ್ಯಾಷನಲ್ ಏಜೆನ್ಸಿಯಿಂದ ತನಿಖೆಯಾಗಲಿ-ಹೆಚ್‍ಡಿಕೆ

ಮಂಗಳೂರು: ಸಿಬಿಐ ಅಲ್ಲ, ಟ್ರಂಪ್ ಸಹಾಯ ಪಡೆದು ಅಂತರಾಷ್ಟ್ರೀಯ ಏಜೆನ್ಸಿಯಲ್ಲೇ ತನಿಖೆ ಮಾಡಲಿ. ಜೆಡಿಎಸ್ ಪಕ್ಷ ಫೋನ್ ಕದ್ದಾಲಿಕೆ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದಕ್ಷಿಣ ಕನ್ನಡ ‌ಜಿಲ್ಲೆಯ ನೆರೆಪೀಡಿತ ಪ್ರದೇಶಕ್ಕೆ ತೆರಳುವುದಕ್ಕೂ ಮುನ್ನ ಕುಮಾರಸ್ವಾಮಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ, ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಪ್ರಕರಣವನ್ನುಸಿಬಿಐ ತನಿಖೆಗೆ ವಹಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ವಿಚಾರದಲ್ಲಿ ಮಾಧ್ಯಮಗಳು ನನ್ನನ್ನು ಎಳೆದು ತರಲು ಯತ್ನಿಸುತ್ತಿವೆ ಎಂದು ಆರೋಪಿಸಿದರು. ನನ್ನ ಮತ್ತು ಜನತೆಯ ನಡುವೆ ಅವಿಶ್ವಾಸ ಮೂಡಿಸಲು ಯತ್ನಿಸುತ್ತಿವೆ. ನಾನು ಯಾವುದೇ ಕಾರಣಕ್ಕೂ ಮಾಧ್ಯಮಗಳ ಒತ್ತಡಕ್ಕೆ ಬಗ್ಗಲ್ಲ ಅಂತ ಹೇಳಿದ್ರು. 

Related posts

Leave a Reply

Your email address will not be published. Required fields are marked *