Breaking News

ಫ್ರಾನ್ಸ್‌ನ ಬೋರ್ಡೆಕ್ಸ್ ಚಾಲೆಂಜರ್ ಟೆನಿಸ್, ಲಿಯಾಂಡರ್ ಜೊತೆ ಭಾರತೀಯ ಜೋಡಿ ಹಣಾಹಣಿ

ಫ್ರಾನ್ಸ್ನ ಬೋರ್ಡೆಕ್ಸ್ ಇಲ್ಲಿ ನಡೆಯುತ್ತಿರುವ ಬೋರ್ಡೆಕ್ಸ್ ಚಾಲೆಂಜರ್ ಟೆನಿಸ್ ಕೂಟದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಅಮೆರಿಕದ ಜೊತೆಗಾರ ಸ್ಕಾಟ್ ಲಿಪ್ಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇವರು ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆತಿಥೇಯ ರಾಷ್ಟ್ರದ ಲೌರೆಂಟ್ ಲೊಕೊಲಿ ಮತ್ತು ಮ್ಯಾಕ್ಸಿಮ್ ಜಾನ್ವೀರ್ ಅವರನ್ನು ೬-೪, ೬-೪ ಸೆಟ್ಗಳ ಅಂತರದಿಂದ ಸೋಲಿಸಿದರು. ಶುಕ್ರವಾರ ನಡೆಯಲಿರುವ ಸೆಮೀಸ್ನಲ್ಲಿ ಪೇಸ್ ಜೋಡಿ ಭಾರತದ ಪುರವ್ ರಾಜಾ- ದಿವಿಜ್ ಶರಣ್ ಅವರನ್ನು ಎದುರಿಸಲಿದ್ದಾರೆ.
ಕಳೆದ ವಾರ ಲಿಯಾಂಡರ್ ಮತ್ತು ಲಿಪ್ಸಿ ತಲಾಸಿ ಚಾಲೆಂಜರ್ ಪ್ರಶಸ್ತಿ ಗೆದ್ದಿದ್ದರು.

Related posts

Leave a Reply