Breaking News

ಫ್ರೆಂಚ್ ಓಪನ್ ಟೆನ್ನಿಸ್ ಫೈನಲ್ಲಿಗೆ ವಾವ್ರಿಂಕಾ, ಜೆಲೆನಾ, ಸಿಮೊನಾ ನಡುವೆ ಮಹಿಳಾ ಫೈನಲ್

ಸ್ವಿಟ್ಜರ್ಲೆಂಡ್ನ ಸ್ಟಾನಿಸ್ಲಾಸ್ ವಾವ್ರಿಂಕಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಂಡಿ ಮರ್ರೆಗೆ ಆಘಾತ ನೀಡುವ ಮೂಲಕ ಫೈನಲ್ ತಲುಪಿದ್ದಾರೆ. ೪೪ ವರ್ಷದ ವಾವ್ರಿಂಕಾ ಫ್ರೆಂಚ್ ಓಪನ್ನಲ್ಲಿ ಫೈನಲ್ ಆಡಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿದ್ದಾರೆ.
೧೯೭೩ರಲ್ಲಿ ೩೩ ವರ್ಷದ ನಿಕಿ ಫಿಲಿಕ್ ಇದುವರೆಗೂ ಇಲ್ಲಿ ಫೈನಲ್ನಲ್ಲಿ ಆಡಿದ ಹಿರಿಯ ಆಟಗಾರ ಎನಿಸಿದ್ದರು. ಆ ಪಂದ್ಯದಲ್ಲಿ ಅವರು ರನ್ನರ್ ಅಪ್ ಆಗಿದ್ದರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ವಿಸ್ ಆಟಗಾರ ೬-೭, ೬-೩, ೫-೭, ೭-೬, ೬-೧ರಲ್ಲಿ ಬ್ರಿಟನ್ನ ಮರ್ರೆಗೆ ಸೋಲುಣಿಸಿದರು. ಐದು ಸೆಟ್ಗಳಲ್ಲಿ ನಡೆದ ದೀರ್ಘ ಸಮಯದ ಪಂದ್ಯದಲ್ಲಿ ಸ್ವಿಸ್ ಆಟಗಾರ ಮೇಲುಗೈ ಸಾಧಿಸಿದರು. ನಾಲ್ಕು ಗಂಟೆ ೩೪ ನಿಮಿಷಗಳ ಪಂದ್ಯ ಇದಾಗಿತ್ತು. ೨೦೧೫ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ವಾವ್ರಿಂಕಾ ತಮ್ಮ ೩೨ನೇ ವಯಸ್ಸಿನಲ್ಲಿ ಅಮೆರಿಕ ಓಪನ್ ಜಯಿಸಿದ್ದರು. ಒಂದು ಹಾಗೂ ಮೂರನೇ ಸೆಟ್ನಲ್ಲಿ ಆಡಲು ಕಷ್ಟ ಆಯಿತು. ಪಂದ್ಯ ಗೆಲ್ಲಬಹುದು ಎಂದು ತಡವಾಗಿ ಅನ್ನಿಸಿತು. ಆ್ಯಂಡಿ ಎದುರು ಗೆಲುವು ಕಷ್ಟ. ಎಲ್ಲಿಯೂ ಪಾಯಿಂಟ್ಸ್ ಪಡೆಯಲು ಸುಲಭವಾಗಿ ಅವರು ಅವಕಾಶ ನೀಡುವುದಿಲ್ಲ. ಇದು ನನ್ನ ಸ್ಮರಣೀಯ ಗೆಲುವು ಎಂದು ವಾವ್ರಿಂಕಾ ಹೇಳಿದ್ದಾರೆ.
ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಹಾಗೂ ರುಮೇನಿಯಾದ ಸಿಮೊನಾ ಹಲೆಪ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಪ್ರಶಸ್ತಿ ಎತ್ತಿಹಿಡಿಯುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಓಸ್ತಪೆಂಕೊ ಹಾಗೂ ಹಲೆಪ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಇಬ್ಬರು ಆಟಗಾರ್ತಿಯರಿಗೂ ಇದು ಮೊದಲ ಗ್ರ್ಯಾಂಡ್ಸ್ಲಾಮ್ ಜಯಿಸುವ ಅವಕಾಶ ಎನಿಸಿದೆ. ಮ್ಯಾಡ್ರಿಡ್ ಓಪನ್ನಲ್ಲಿ ಚಾಂಪಿಯನ್ ಆಗಿದ್ದ ಹಲೆಪ್ ಇಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ. ರೋಮ್ನಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಅವರು ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಕೂಡ ಹೌದು.

Related posts

Leave a Reply