Breaking News

ಫ್ರೆಂಚ್ ಓಪನ್ ಟೆನ್ನಿಸ್ ಬೋಪಣ್ಣ ಮುನ್ನಡೆ, ಜಾಕೋವಿಕ್, ಮುಗುರುಜಾ, ವೀನಸ್ ಮೂರನೇ ಸುತ್ತಿಗೆ

ಹಾಲಿ ಚಾಂಪಿಯನ್ಗಳಾದ ನೊವಾಕ್ ಜೊಕೊವಿಚ್ ಮತ್ತು ಗಾರ್ಬೈನ್ ಮುಗುರುಜಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಪುರುಷರ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸರ್ಬಿಯಾದ ನೊವಾಕ್ ೬-೧, ೬-೪, ೬-೩ರ ನೇರ ಸೆಟ್ಗಳಿಂದ ಪೋರ್ಚುಗಲ್ನ ಜಾವೊ ಸೌಸಾ ಅವರನ್ನು ಮಣಿಸಿದರು. ಆಕರ್ಷಕ ಕ್ರಾಸ್ಕೋರ್ಟ್ ಹೊಡೆತಗಳ ಮೂಲಕ ಅಂಗಳದಲ್ಲಿ ಮಿಂಚು ಹರಿಸಿದ ನೊವಾಕ್ ಅವರು ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿನಿಂತರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಮುಗುರುಜಾ ೬-೭, ೬-೪, ೬-೨ರಲ್ಲಿ ಅನೆಟ್್ ಕೊಂಟಾವೀಟ್ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ೬-೩, ೬-೧ರಲ್ಲಿ ಜಪಾನ್ನ ಕುರುಮಿ ನಾರಾ ವಿರುದ್ಧ ಗೆದ್ದರು. ಭಾರತದ ರೋಹನ್ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳೆಯರ ಡಬಲ್ಸ್ನಲ್ಲಿ ಭಾರತದ ಭರವಸೆ ಅನಿಸಿದ್ದ ಸಾನಿಯಾ ಮಿರ್ಜಾ ಅವರು ಆರಂಭಿಕ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.

Related posts

Leave a Reply