Header Ads
Header Ads
Breaking News

ಫ್ರೆಂಚ್ ಓಪನ್ ಟೆನ್ನಿಸ್, ರೋಹನ್ ಬೋಪಣ್ಣಗೆ ಮೊದಲ ಗ್ರಾನ್‌ಸ್ಲಾಂ ಕಿರೀಟ

ಭಾರತದ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಅವರು ಕೆನಡಾದ ಗ್ಯಾಬ್ರಿಯೆಲಾ ದಾಬ್ರೊವ್ಸ್ಕಿ ಅವರೊಂದಿಗೆ ತಮ್ಮ ವೃತ್ತಿಜೀವನದ ಕನಸು ನನಸು ಮಾಡಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ-ಕೆನಡಾದ ಏಳನೇ ಶ್ರೇಯಾಂಕದ ಜೋಡಿ ೨-೬, ೬-೨, ೧೨-೧೦ರಲ್ಲಿ ಜರ್ಮನಿಯ ಅನ್ನಾಲೆನಾ ಗ್ರ್ಯಾನೊಫೆಲ್ಡ್ ಮತ್ತು ಕೊಲಂಬಿಯಾದ ರಾಬರ್ಟ್ ಫರಾ ಅವರಿಗೆ ಆಘಾತ ನೀಡಿತು. ಬೋಪಣ್ಣಗೆ ಇದು ಎರಡನೇ ಗ್ರ್ಯಾಂಡ್ಸ್ಲಾಮ್ ಫೈನಲ್ ಪಂದ್ಯ ಎನಿಸಿತ್ತು. ಮೊದಲ ಸೆಟ್ನಲ್ಲಿ ತೀವ್ರ ಹಿನ್ನಡೆಯೊಂದಿಗೆ ಸೋಲು ಕಂಡಿದ್ದ ಬೋಪಣ್ಣ ಜೋಡಿ ಬಳಿಕ ಆಕರ್ಷಕ ರೀತಿಯಲ್ಲಿ ತಿರುಗೇಟು ನೀಡಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಟ್ನಲ್ಲಿ ಬೋಪಣ್ಣ ಹಾಗೂ ದಾಬ್ರೊವ್ಸ್ಕಿ ಜಾಣ್ಮೆಯ ಆಟದಿಂದ ಗೆಲುವಿನ ಕದ ತಟ್ಟಿದರು.
ಬೋಪಣ್ಣ ೨೦೧೦ರ ಅಮೆರಿಕ ಓಪನ್ನಲ್ಲಿ ಪಾಕಿಸ್ತಾನದ ಅಸೀಮ್ ಉಲ್ ಹಕ್ ಖುರೇಷಿ ಅವರೊಂದಿಗೆ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಸೋಲು ಕಂಡಿದ್ದರು. ಈ ಪಂದ್ಯದಲ್ಲಿ ಬೋಪಣ್ಣ ಜೋಡಿ ಬಾಬ್ ಹಾಗೂ ಮೈಕ್ ಸೋಹದರರ ಎದುರು ಸೋಲು ಕಂಡಿತ್ತು. ಇಲ್ಲಿಯವರೆಗೂ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಮಾತ್ರ ಭಾರತಕ್ಕೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ತಂದುಕೊಟ್ಟಿದ್ದರು.

Related posts

Leave a Reply