Header Ads
Header Ads
Header Ads
Breaking News

ಫ್ಲಾಶ್ ಮಾಬ್ ಮತ್ತು ಪ್ಲಾಸ್ಟಿಕ್ ಕುರಿತು ಎಚ್ಚರಿಸುವ ಬೀದಿ ನಾಟಕ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಗೃತಿ

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಫ್ಲಾಶ್ ಮಾಬ್ ಮತ್ತು ಪ್ಲಾಸ್ಟಿಕ್ ಕುರಿತು ಎಚ್ಚರಿಸುವ ಬೀದಿ ನಾಟಕದ ದೃಶ್ಯಾವಳಿ ಎಲ್ಲರ ಗಮನ ಸೆಳೆಯಿತು.

ಗುಂಪಿನಲ್ಲಿ ಸೇರಿದ ಕಾಲೇಜು ವಿದ್ಯಾರ್ಥಿಗಳು ಹಿನ್ನೆಲೆ ಧ್ವನಿಗೆ ನರ್ತಿಸುತ್ತಿದ್ದರು. ವಿವಿಧ ಹಾಡುಗಳ ತುಣುಕನ್ನ ಸೇರಿಸಿ ಮಾಡಿದ ಹಾಡಿಗೆ ಸುಮಾರು 20 ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಕುಣಿಯುತ್ತಿದ್ದರೆ. ದಾರಿ ಹೋಕರು ಇವರ ನೃತ್ಯದ ಸೊಬಗಿಗೆ ಕೆಲಕಾಲ ನಿಂತು ನೃತ್ಯವನ್ನ ಆಸ್ವಾದಿಸಿದರು. ಹೌದು ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಫ್ಲಾಶ್ ಮಾಬ್ ಮತ್ತು ಪ್ಲಾಸ್ಟಿಕ್ ಕುರಿತು ಎಚ್ಚರಿಸುವ ಬೀದಿನಾಟಕದ ದೃಶ್ಯಾವಳಿ ಇವು.

ಪ್ರತಿವರ್ಷ ಗಣರಾಜ್ಯೋತ್ಸವದಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾಲೇಜಿನ ಎನ್‌ಎಸ್‌ಎಸ್ ಮತ್ತು ರೆಡ್‌ಕ್ರಾಸ್ ವತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನ ಸಾಮಾನ್ಯವಾಗಿ ಇವರು ಹಮ್ಮಿಕೊಳ್ಳುತ್ತಾರೆ. ಆದರೆ ಈ ಭಾರಿ ಫ್ಲಾಶ್ ಮಾಬ್ ಮತ್ತು ಬೀದಿ ನಾಟಕದ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಲಾಗಿದೆ.


ಬೀದಿ ನಾಟಕದ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಚತೆಯ ಪಾಠವನ್ನ ಸಾರ್ವಜನಿಕರಿಗೆ ಮಾಡಿದರು. ನಮ್ಮ ನೇತಾರರು ಯಾವ ರೀತಿ ಸ್ವಚ್ಚತಾ ಕಾರ್ಯಕ್ರಮವನ್ನ ನಡೆಸುತ್ತಾರೆ ಎನ್ನುವುದನ್ನ ಅಣಕ ಮಾಡಿ ತೋರಿಸಿದರು.

ಸುಮಾರು ಅರ್ಧಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದರೆ. ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುವ ಕೆಲಸದಲ್ಲಿ ಬ್ಯೂಸಿಯಾಗಿದ್ದರು. ಕಾಲೇಜು ವಿದ್ಯಾರ್ಥಿಗಳ ಜಾಗೃತಿಗಾಗಿ ಮಾಡಿದ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದರು.

ಹರೀಶ್ ಕಿರಣ್ ತುಂಗಾ, ಕುಂದಾಪುರ

Related posts

Leave a Reply