Header Ads
Header Ads
Breaking News

ಬಂಜರು ಸ್ಥಳದಲ್ಲಿ ರಸ್ತೆಗೆ ಅನುಮತಿ ನೀಡಲು ಒತ್ತಾಯ: ಮಂಜೇಶ್ವರ ವೆಲ್ಪೇರ್ ಪಾರ್ಟಿಯಿಂದ ಧರಣಿ

ಮಂಜೇಶ್ವರ: ಹಲವಾರು ವರ್ಷಗಳಿಂದ ಬಂಜರಾಗಿದ್ದ ಸ್ಥಳವನ್ನು ಕೃಷಿ ಸ್ಥಳವನ್ನಾಗಿ ಮಾಡಿದ ಸನ್ನಡ್ಕ ಕೃಷಿ ಭೂಮಿಗೆ ರಸ್ತೆಯನ್ನು ಅನುಮತಿಸಬೇಕೆಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿಯ ಮಂಜೇಶ್ವರ ಸಮಿತಿಯ ಮುಂದಾಳತ್ವದಲ್ಲಿ ಮಂಜೇಶ್ವರ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿದರು.ಧರಣಿಯನ್ನು ಉದ್ದೇಶಿಸಿದ ವೆಲ್ಫೇರ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ ಕೆ ಅಬ್ದುಲ್ಲ ಅವರು ಬಳಿಕ ಇಲ್ಲಿಯ ಕೃಷಿಕರ ಪ್ರಧಾನ ಬೇಡಿಕೆಯಾದ ರಸ್ತೆ.

ಇದನ್ನು ವೆಲ್ಫೇರ್ ಪಾರ್ಟಿ ಕಾನೂನು ಹೋರಾಟದ ಮೂಲಕ ನ್ಯಾಯಾಲಯದ ಮೆಟ್ಟಲೇರಿ ರಸ್ತೆ ಅನುಮತಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ನ್ಯಾಯ ಸಮ್ಮತವಾದ ಅಂಗೀಕಾರ ಕೂಡಾ ಲಭಿಸಿದೆ ಜೊತೆಯಾಗಿ ದಾರಿಯನ್ನು ಅನುವು ಮಾಡಿ ಕೊಡುವಂತೆ ನಿರ್ದೇಶನ ಕೂಡ ಇದೆ. ಆದರೆ ಇದನ್ನು ಸಂಬಂಧಪಟ್ಟವರು ಜ್ಯಾರಿಗೆ ತರದೇ ಇರುವುದು ಪ್ರತಿಭಟನಾರ್ಹವಾಗಿದೆ.ರಸ್ತೆಯನ್ನು ಕಬಳಿಸಿರುವ ವ್ಯಕ್ತಿಗಳಿಗೆ ಪಂ. ಅಧಿಕೃತರು ಬೆಂಬಲವಾಗಿ ನಿಂತರೆ ಜನಕೀಯವಾದ ದಾರಿಯಲ್ಲಿ ರಸ್ತೆ ನಿರ್ಮಿಸಬೇಕಾಗಬಹುದಾಗಿ ಅವರು ಹೇಳಿದರು.ಪಕ್ಷದ ಮಂಜೇಶ್ವರ ಪಂ. ಅಧ್ಯಕ್ಷ ಬಿ. ಮೊಯ್ದೀನ್ ಕುಂಞ, ರವೀಂದ್ರ ಶೆಟ್ಟಿ, ಅಬ್ದುಲ್ ಖಾದರ್ ಕುಂಜತ್ತೂರು, ಶಂಸುದ್ದೀನ್ ಮೊದಲಾದವರು ಹಾಜರಿದ್ದರು.

Related posts

Leave a Reply