Header Ads
Header Ads
Header Ads
Breaking News

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಕಾರ್ಯಕ್ರಮ ಜ.26 ರಂದು ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಸಂತೋಷ ಕೂಟ

ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದಿಂದ ಶಕ್ತಿ ಸಂಗಮ ಎಂಬ ಸಂತೋಷ ಕೂಟ ಜ.26 ರಂದು ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಆಶಾಜ್ಯೋತಿ ರೈ ಜನವರಿ 26 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆ ವರೆಗೆ ಸಂತೋಷ ಕೂಟ ಸಂಭ್ರಮಾಚರಣೆ ಆಯೋಜಿಸಿದ್ದೇವೆ. ವಿಶೇಷ ಆ ದಿನದಂದು ಇಂದ್ರ ಧನುಷ್ ಎಂಬ ವಿವಿಧ ಆಕರ್ಷಣೀಯ ಸರಣಿ ಕಾರ್ಯಕ್ರಮಗಳಿದ್ದು, ಆಧುನಿಕ ಮತ್ತು ಜನಪದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಗೌರವಾಧ್ಯಕ್ಷರಾದ ಜಯಲಕ್ಷ್ಮೀ ಹೆಗ್ಡೆ, ಸುಲತಾ ಜೆ, ಶೆಟ್ಟಿ, ನಿವೇದಿತಾ ಎನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply