
ಬಂಟರ ಸಂಘ ಸುರತ್ಕಲ್ ಇದರ ವಾರ್ಷಿಕ ಸಮಾವೇಶ, ಅಭಿನಂದನೆ, ಸಹಾಯಹಸ್ತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಸುರತ್ಕಲ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ಮೂಡುಬಿದರೆ ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಂಟರ ಸಂಘ ಸುರತ್ಕಲ್ ಸಾಮಾಜಿಕವಾಗಿಯೂ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜದ ಉನ್ನತಿಗಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಸಹಾಯಹಸ್ತ ಮತ್ತು ಪ್ರತಿಭಾ ಪುರಸ್ಕಾರವನ್ನು ಗಣ್ಯರು ವಿತರಿಸಿದರು.ಕಾರ್ಯಕ್ರಮದಲ್ಲಿ 2020ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ಸಣ್ಣ ನೀರಾವರಿ ವಿಭಾಗ ಮಂಗಳೂರಿನ ಕಾರ್ಯಪಾಲಕ ಅಭಿಯಂತರ ದಯಾನಂದ ದಾಸ್, ಸುರತ್ಕಲ್ ವಿಜಯ ಮೆಡಿಕಲ್ಸ್ ದಯಾನಂದ್ ಡಿ. ಶೆಟ್ಟಿ, ಮುಂಬಯಿಯ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಿತಿ ಬಂಟರದ ಸಂಘದ ಇದರ ಕಾರ್ಯಧ್ಯಕ್ಷ ಕರ್ನೂರ್ ಮೋಹನ್ ರೈ ಮುಂಬಯಿ, ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಪುರುಷೋತ್ತಮ ಕೆ ಭಂಡಾರಿ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ ಸುಧಾಕರ್ ಎಸ್. ಪೂಂಜಾ ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು