Header Ads
Header Ads
Breaking News

ಬಂಟ್ವಾಳ:ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ,ಐದು ಲಕ್ಷ ರೂ. ಮೌಲ್ಯದ ಮರದ ದಿಮ್ಮಿ ವಶ

ಬಂಟ್ವಾಳ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಬಂಟ್ವಾಳ ಅರಣ್ಯ ಇಲಾಖೆಯ ವರು ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ವಶಪಡಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಐದು ಲಕ್ಷ ರೂಪಾಯಿ.ಆರೋಪಿ ಲಾರಿ ಚಾಲಕ ಪರಾರಿಯಾಗಿದ್ದಾನೆ.

ಸಕಲೇಶಪುರದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖಾ ಸಿಬ್ಬಂದಿ ಗಳು ಮೆಲ್ಕಾರ್ ಎಂಬಲ್ಲಿ ದಾಳಿ ನಡೆಸಿದಾಗ ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಸಹಿತ ಮರದ ದಿಮ್ಮಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾ ಧಿಕಾರಿ ಡಾ! ಕರಿಕಲನ್ ಮಾರ್ಗದರ್ಶನ ದಂತೆ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಶಂಕರೇಗೌಡಯವರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಚರಣೆ ಯಲ್ಲಿ ಬಂಟ್ವಾಳ ವಲಯಾರಣ್ಯಾಧಿಕಾರಿ ಬಿ.ಸುರೇಶ್, ಉಪವಲಯಾರಣ್ಯಾಧಿಕಾರಿ ಪ್ರೀತಂ, ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್, ವಿನಯ್, ಲಕ್ಮೀನಾರಾಯಣ, ರವಿಕುಮಾರ್ ರೇಖಾ, ದಯಾನಂದ, ಹಾಗೂ ಸಿಬ್ಬಂದಿ ಗಳಾದ ಪ್ರವೀಣ ಕೆಲಿಂಜ ಮತ್ತು ಜಯರಾಮ ಪಾಲ್ಗೊಂಡಿದ್ದರು.

Related posts

Leave a Reply