Header Ads
Header Ads
Breaking News

ಬಂಟ್ವಾಳ:ಇಂದಿರಾ ಕ್ಯಾಂಟೀನ್‌ಗೆ ರಸ್ತೆ ಅತಿಕ್ರಮಿಸಿ ಆವರಣಗೋಡೆ ನಿರ್ಮಾಣ

ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ಗೆ ರಸ್ತೆಯನ್ನು ಅತಿಕ್ರಮಿಸಿ ಆವರಣಗೋಡೆ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶದ ಮಾತುಗಳು ಕೇಳಿ ಬಂದಿದೆ.ಪುರಸಭಾ ಮುಖ್ಯಾಧಿಕಾರಿ ರೇಖಾಶೆಟ್ಟಿ ಹಾಗೂ ಯೋಜನಾ ನಿರ್ದೇಶಕ ಪ್ರಸನ್ನ ಅವರು ಕಾಮಗಾರಿ ಪರೀಶೀಲನೆಗೆ ಬಂದಿದ್ದ ವೇಳೆ ಸ್ಥಳೀಯ ವಾರ್ಡ್ ಸದಸ್ಯ ಗೋವಿಂದ ಪ್ರಭು ಅವರು ಅವರು ರಸ್ತೆ ಅತಿಕ್ರಮಿಸಿಕೊಂಡು ಆವರಣ ಗೋಡೆ ನಿರ್ಮಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಬಿ.ಸಿರೋಡಿನಲ್ಲಿ ಸ್ಥಳಾವಕಾಶ ಕಡಿಮೆ ಇದ್ದು ವಾಹನಗಳ ನಿಲುಗಡೆಗೆ ತೊಂದರೆ ಅನುಭವಿಸಬೇಕಾಗಿದೆ. ಇನ್ನೂ ಆವರಣ ಗೋಡೆ ನಿರ್ಮಿಸಿದರೆ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ ಎಂದು ಅಧಿಕಾರಿಗಳನ್ನು ತೀರ ತರಾಟೆಗೆ ತೆಗೆದು ಕೊಂಡರು. ಈ ಸಂದರ್ಭ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಗೊಂದಲದ ವಾತವರಣ ನಿರ್ಮಾಣಗೊಳ್ಳುತ್ತಿದ್ದಂತೆಯೇ ಮುಖ್ಯಾಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಲ್ಲಿಯೇ ಇದ್ದ ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ತರಾಟೆಗೆ ತೆಗೆದುಕೊಂಡಾಗ ಈಗಾಗಲೇ ನಿರ್ಮಿಸಿರುವ ಆವರಣ ಗೋಡಯನ್ನು ತೆರವುಗೊಳಿಸಲಾಯಿತು.

Related posts

Leave a Reply