Header Ads
Header Ads
Breaking News

ಬಂಟ್ವಾಳ:ಎಸ್‌ವಿಎಸ್ ಕಾಲೇಜಿನಲ್ಲಿ 2018-19ನೇ ಸಾಲಿನ ಶಿಕ್ಷಕ ರಕ್ಷಕ ಮಹಾಸಭೆ

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಶಿಕ್ಷಕ ರಕ್ಷಕ ಮಹಾಸಭೆ ಜರುಗಿತು.

ಮೂಡಬಿದ್ರೆ ಜೈನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ತಾನು ಕೂಡಿಟ್ಟ ಹಣ ಅಂತಸ್ತಿಗಿಂತ ತನ್ನ ಮಕ್ಕಳು ಪ್ರತಿಯೊಬ್ಬ ತಂದೆ ತಾಯಿಯ ದೊಡ್ಡ ಸಂಪತ್ತು. ಮಗುವಿನಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಪ್ರಶಂಸಿಬೇಕು. ಮಗುವನ್ನು ಮಗುವಿನ ರೀತಿಯಲ್ಲಿ ಬೆಳೆಯಲು ಬಿಟ್ಟು ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸಬೇಕು. ನಮ್ಮಲ್ಲಿ ತನ್ನ ಮಗುವಿನ ಮೇಲೆ ದೃಢವಾದ ವಿಶ್ವಾಸ ಜತೆ ಪೋಷಿಸುವ ಹೊಣೆಗಾರಿಕೆ ಇರಬೇಕು ಎಂದು ಹೇಳಿದರು.

ಎಸ್. ವಿ.ಎಸ್. ಪದವಿ ಕಾಲೇಜು ಉಪಪ್ರಾಂಶುಪಾಲೆ ಡಾ. ಎಚ್. ಆರ್ ಸುಜಾತ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ., ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಬಾಲಕೃಷ್ಣ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇದಾನಂದ ಕಾರಂತ್, ಶಿಕ್ಷಕ ರಕ್ಷಕ ಸಂಘದ ಕೋಶಾಧಿಕಾರಿ ಕೃಷ್ಣ ನಾಯಕ್ ಬಿ. ಉಪಸ್ಥಿತಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು ೮೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದರು

Related posts

Leave a Reply