Header Ads
Header Ads
Breaking News

ಬಂಟ್ವಾಳಕ್ಕೆ ಆಗಮಿಸಿದ ಸಚಿವೆ ಜಯಮಾಲ. ಬಿ.ಸಿ. ರೋಡಿನ ರಾಣಿ ಅಬ್ಬಕ್ಕ ಕೇಂದ್ರಕ್ಕೆ ಭೇಟಿ .

ಬಂಟ್ವಾಳ: ಈ ದೇಶದ ಚರಿತ್ರೆ ಕಟ್ಟುವಾಗ ತುಳುನಾಡಿನ ರಾಣಿ ಅಬ್ಬಕ್ಕನಿಗೆ ಮೋಸ ಆಗಿದೆ. ಪೋರ್ಚುಗೀಸರೊಡನೆ ಹೋರಾಡಿದ ವೀರ ಮಹಿಳೆಗೆ ಚರಿತ್ರೆಯಲ್ಲಿ ಸರಿಯಾದ ಸ್ಥಾನ ಸಿಕ್ಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಾ. ಜಯಮಾಲ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಸೋಮವಾರ ಸಂಜೆ ಮಾಜಿ ಸಚಿವ ಬಿ.ರಮಾನಾಥ ರೈಯವರೊಂದಿಗೆ ಬಿ.ಸಿ. ರೋಡಿನ ರಾಣಿ ಅಬ್ಬಕ್ಕ ಕೇಂದ್ರಕ್ಕೆ ಭೇಟಿ ನೀಡಿ ಕಲಾ ಗ್ಯಾಲರಿ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ತುಳು ಬದುಕು ವಸ್ತು ಸಂಗ್ರಹಾಲಯ ದೇಶದಲ್ಲೇ ಒಂದು ಅದ್ಭುತ ಸಂಗ್ರಹಾಲಯ. ಈ ಸಂಗ್ರಹಾಲಯವನ್ನು ರೂಪಿಸಿದ ಪ್ರೊ. ತುಕರಾಮ ಪೂಜಾರಿ ಸಾಧನೆ ವಿಶಿಷ್ಟವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರಾ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಬೇಬಿ ಕುಂದರ್, ಪದ್ಮನಾಭ ರೈ, ಮಧುಸೂಧನ್ ಶೆಣೈ, ವೆಂಕಪ್ಪ ಪೂಜಾರಿ, ಲೋಕೇಶ್ ಸುವರ್ಣ ಮತ್ತಿತರರು ಹಾಜರಿದ್ದರು.

Related posts

Leave a Reply