Header Ads
Header Ads
Breaking News

ಬಂಟ್ವಾಳ:ಡಿಸೆಂಬರ್ 15 ರಿಂದ 21ರ ವರೆಗೆ ಯಕ್ಷಗಾನ ಸಪ್ತಾಹ:ಕೈಯೂರು ನಾರಾಯಣ ಭಟ್‌ರಿಂದ ಮಾಹಿತಿ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ವತಿಯಿಂದ ಬಂಟ್ವಾಳ ತಾಲೂಕಿನ ಮೇಲ್ಕಾರ್ ಆರ್.ಕೆ.ಎಂಟರ್ ಪ್ರೈಸಸ್ ಎದುರು ನಡೆಯಲಿರುವ ಯಕ್ಷಗಾನ ಸಪ್ತಾಹದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ ಪ್ರೆಸ್‌ಕ್ಲಬ್ ನಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತ್ ಕನ್ನಡ ಭವನ ಸಮಿತಿ ಅಧ್ಯಕ್ಷ ಕೊಳಕೆ ಗಂಗಾಧರ ಭಟ್ ಮತ್ತು ನಾಗೇಶ್ ರಾವ್ ಆಮಂತ್ರಣ ಬಿಡುಗಡೆಗೊಳಿಸಿದರು. ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಪ್ರಮುಖರಾದ ಕೃಷ್ಣ ಶರ್ಮ ಈ ಸಂದರ್ಭ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಕೈಯೂರು ನಾರಾಯಣ ಭಟ್, ಡಿ.15ರಂದು ಯಕ್ಷಗಾನ ಕಾರ್ಯಕ್ರಮ ಸಂಜೆ 6ಕ್ಕೆಆರಂಭಗೊಳ್ಳಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. 21ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಕ್ ವಹಿಸುವರು.

೧೫ರಂದು ಗಿರಿಜಾ ಕಲ್ಯಾಣ ತಾರಕಾಸುರ ವಧೆ, 16ರಂದು ಶರಸೇತು, ಸುಭದ್ರಾ ಕಲ್ಯಾಣ, 17ರಂದು ಕನಕಾಂಗಿ ಕಲ್ಯಾಣ, 18ರಂದು ಅತಿಕಾಯ ಇಂದ್ರಜಿತು, 19ರಂದು ಮಾಗಧ ವಧೆ, ಪುರುಷಾಮೃಗ, ರಕ್ತರಾತ್ರಿ, 20ರಂದು ವಸ್ತ್ರಾಪಹಾರ, ಗದಾಪರ್ವ,21ರಂದು ದ್ರೌಪದಿ ಪ್ರತಾಪ ಪ್ರಸಂಗಗಳು ಸಂಜೆ6.30ರಿಂದ ರಾತ್ರಿ 10.30ರವರೆಗೆ ಪ್ರದರ್ಶನಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.

Related posts

Leave a Reply