Header Ads
Header Ads
Breaking News

ಬಂಟ್ವಾಳದಲ್ಲಿಯೇ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಬೇಕು:ದಲಿತ ಮುಖಂಡರ ಆಗ್ರಹ

ಬಂಟ್ವಾಳ : ಮಂಗಳೂರಿನ ತೋಟಬೆಂಗ್ರೆ ಬೀಚ್‌ನಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಸಂತ್ರಸ್ಥ ಯುವತಿಯ ದೂರು ಸ್ವೀಕರಿಸಲು ನಿರಾಕರಿಸುವ ಮೂಲಕ ಠಾಣೆಗೆ ಬಾರದಂತೆ ತಡೆಯುವ ಗುಪ್ತ ಅಜೆಂಡ ಸಾಭೀತಾಗಿದೆ ಎಂದು ಬಂಟ್ವಾಳದ ದಲಿತ ಮುಖಂಡರು ಆರೋಪಿಸಿದ್ದಾರೆ.

ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್‌ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರರವರು ಬಂಟ್ವಾಳ ಪೊಲೀಸರು ನೊಂದು ಬರುವ ದೂರುದಾರರ ದೂರು ಸ್ವೀಕರಿಸುವ ಮತ್ತು ಆಲಿಸುವ ಕನಿಷ್ಠ ಸೌಜನ್ಯವನ್ನು ತೋರುವುದಿಲ್ಲ ಎಂದು ಆರೋಪಿಸಿದರು.

 ಪೊಲೀಸರು ಇಂತಹ ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಟ್ಟಿರುವುದೇ ಸಾಮೂಹಿಕ ಅತ್ಯಾಚಾರದಂತ ಹೇಯ ಘಟನೆ ನಡೆಯುತ್ತಿದೆ ಎಂದ ಅವರು ಪೊಲೀಸರು ಈ ಅತ್ಯಾಚಾರ ಪ್ರಕರಣದಲ್ಲಿ ಕೇವಲ ಕೇಸು ದಾಖಲಿಸಿ, ಆರೋಪಿಗಳ ಬಂಧಿಸಿದ ಮಾತ್ರಕ್ಕೆ ಮುಗಿಯುವುದಿಲ್ಲ. ಈ ಕೃತ್ಯದ ಮೂಲವನ್ನು ಪತ್ತೆಹಚ್ಚಬೇಕು ಎಂದರು.

ಬಂಟ್ವಾಳ ನಗರ ಠಾಣೆಯ ಕೂಗಳತೆಯಲ್ಲಿಯೇ ಗಾಂಜಾ ಅಡ್ಡೆ ಇದ್ದರೂ ಪೊಲೀಸರು ಮೌನವಹಿಸಿದ್ದಾರೆ. ಗಾಂಜಾ ಅಡ್ಡೆಗಳ ಬಗ್ಗೆ ಪೂರ್ಣ ಮಾಹಿತಿ ಇದ್ದರೂ, ಪೊಲೀಸರು ಅತ್ತ ತಲೆಕೂಡ ಹಾಕುತ್ತಿಲ್ಲ ಎಂದು ಆರೋಪಿಸಿದ ಅವರು, ಸಂತ್ರಸ್ಥೆಯ ದೂರು ಸ್ವೀಕರಿಸದೆ ಎಎಸ್‌ಐ ಅವರನ್ನು ಅಮಾನತುಗೊಳಿಸಿ, ಕೇಸು ದಾಖಲಿಸಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ, ಕುಟುಂಬವನ್ನು ಕಾಪಾಡುವ ಗುರುತರ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ಸಂತ್ರಸ್ಥೆಯ ಹಿತದೃಷ್ಠಿಯಿಂದ ಪ್ರಕರಣದ ವಿಚಾರಣೆಗೆ ಬಂಟ್ವಾಳದಲ್ಲಿಯೇ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಭಾನುಚಂದ್ರ ಅವರು ಸಾಮೂಹಿಕ ಅತ್ಯಾಚಾರದ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಹಾಜರಿದ್ದ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರು ಮಾತನಾಡಿ.ದ.ಕ.ಜಿಲ್ಲೆಯಲ್ಲಿ ಬಿಹಾರದಂತೆ ಈಗಲೂ ದಲಿತರನ್ನು ಅಸ್ಪ್ರಶ್ಯರನ್ನಾಗಿ ಕಾಣುವ ಮನೋಭಾವ ಮುಂದುವರಿದಿದೆ. ಯುವತಿಯ ಅತ್ಯಾಚಾರ ಪ್ರಕರಣದಲ್ಲೂ ಮಾನವೀಯತೆ ಪ್ರದರ್ಶಿಸಬೇಕಾದ ವಿವಿಧ ಸಂಘಟನೆಗಳಲ್ಲಿ ಅಸ್ಪ್ರಶ್ಯತೆಯ ಸೋಂಕು ಕಂಡು ಬಂದದ್ದು ಬೇಸರ ತಂದಿದೆ ಎಂದರು. ಜಿಲ್ಲಯಲ್ಲಿ ಗಾಂಜಾ ಮಾಫಿಯಾ ನಡೆಯುತ್ತಿದ್ದರೂ ,ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಗಾಂಜಾ ವ್ಯಸನಿಗಳಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಹೇಳಿಕೆ ನೀಡಿರುವುದು ಸರಿಯಲ್ಲ, ಪೊಲೀಸ್ ಇಲಾಖೆಯೇ ಗಾಂಜಾ, ಡ್ರಗ್ಸ್ ಮಾಫಿಯಾದ ಜೊತೆ ಶಾಮೀಲಾಗಿರುವ ಅನುಮಾನ ಇದೆ ಎಂದರು. ದಲಿತ ಮುಖಂಡರಾದ ರಾಜ ಪಲ್ಲಮಜಲು, ಜಯ.ವಿ.ಸಂಪೋಲಿ, ರಾಜೀವ ಕಕ್ಕೆಪದವು ಉಪಸ್ಥಿತರಿದ್ದರು.

Related posts

Leave a Reply