Header Ads
Header Ads
Header Ads
Breaking News

ಬಂಟ್ವಾಳದಲ್ಲಿರುವ ಅಕ್ರಮ ಕಟ್ಟಡ ವಿಚಾರ

ಬಂಟ್ವಾಳ: ಪುರಸಭಾಧ್ಯಕ್ಷರ ಆರೋಪದಂತೆ ಮುಂದಿನ ಒಂದು ತಿಂಗಳೊಳಗಾಗಿ ನನ್ನ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಸಿದ್ದನಿದ್ದೇನೆ. ಅದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಪುರಸಭೆ ಅಧ್ಯಕ್ಷರು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತೀರಾ? ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಪುರಸಭಾಡಳಿತಕ್ಕೆ ಸವಾಲು ಹಾಕಿದ್ದಾರೆ.

ಬಿ.ಸಿ.ರೋಡಿನಲ್ಲಿ ಸುದಿಗೋಷ್ಟಿ ನಡೆಸಿದ ಅವರು ಪುರಸಭಾಧ್ಯಕ್ಷ ರಾಮಕೃಷ್ಣ ಆಳ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು. ನನ್ನ ಮಿಲ್ಕ್ ಪಾರ್ಲರ್‌ಗೆ 1998 ರಿಂದ 2017 ಮಾರ್ಚ್ ತಿಂಗಳವರೆಗೆ ಪರವಾನಿಗೆಯನ್ನು ಪಡೆದುಕೊಂಡಿದ್ದೇನೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪುರಸಭಾಧ್ಯಕ್ಷರ ದ್ವೇಷದ ರಾಜಕಾರಣದಿಂದಾಗಿ ಇನ್ನೂ ಪರವಾನಿಗೆ ನವೀಕರಣಗೊಂಡಿಲ್ಲ ಎಂದರು. ಬಂಟ್ವಾಳ ಪುರಸಭೆ ರಾಜ್ಯದ ನಂ.1 ಭ್ರಷ್ಟಾಚಾರವಿರುವ ಪುರಸಭೆ ಎಂದು ಟೀಕಿಸಿದ ದೇವದಾಸ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಿರುವ ಕಟ್ಟಡ ಅನಧಿಕೃತ ಎನ್ನುವುದಕ್ಕೆ ಅಧಿಕೃತ ದಾಖಲೆಗಳಿದ್ದರೂ ಅದು ಕಾನೂನು ಪ್ರಕಾರ ಇದೆ ಎಂಬುದಾಗಿ ನೀಡುತ್ತಿರುವ ಹೇಳಿಕೆ ಅನುಭವದ ಕೊರತೆಯೋ ಅಥವಾ ತನಗೆ ಅಧಿಕಾರ ನೀಡಿದಕ್ಕಾಗಿ ಋಣ ತೀರಿಸುವುದಕೋಸ್ಕರ ಸಂಬಂಧಪಟ್ಟವರನ್ನು ತೃಪ್ತಿ ಪಡಿಸುವ ಓಲೈಕೆ ರಾಜಕಾರಣವೋ ಎಂದು ಲೇವಡಿ ಮಾಡಿದರು. ಬಂಟ್ವಾಳದಲ್ಲಿ ಅಗ್ನಿಶಾಮಕ ದಳ, ಕೋರ್ಟು ಕಟ್ಟಡ, ಪಾಲಿಟೆಕ್ನಿಕ್, ಸಮುದಾಯ ಆರೋಗ್ಯ ಕೇಂದ್ರ ಮೇಲ್ದೆರ್ಜೇಗೇರಿರುವುದು, ಪದವಿ ಹಾಗೂ ಪದವಿಪೂರ್ವ ಕಾಲೇಜುಗಳು ನಿರ್ಮಾಣಗೊಂಡಿರವುದು ಬಿಜೆಪಿ ಸರಕಾರದ ಅವಧಿಯಲ್ಲಿ. ಕಳೆದ 30 ವರ್ಷಗಳಿಂದ ಶಾಸಕರಾಗಿದ್ದರೂ ತಾಲೂಕಿಗೆ ಒಂದು ಸಮರ್ಪಕ ಕ್ರೀಡಾಂಗಣವಿಲ್ಲ, ವಿದ್ಯಾವಂತ ಯವಕರಿಗೆ ಉದ್ಯೋಗಕ್ಕೆ ಅವಕಾಶ ನೀಡುವ ಯಾವುದೇ ಯೋಜನೆಗಳಿಲ್ಲ. ಒಂದೇ ಒಂದು ಉನ್ನತ ಕೈಗಾರಿಕೆಯಿಲ್ಲ, ಒಳಚರಂಡಿ, ಸುಸಜ್ಜಿತ ಬಸ್ಸುತಂಗುದಾಣ ವಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರುಕ್ಮಯಪೂಜಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ರಾಮದಾಸ ಬಂಟ್ವಾಳ, ಜಿ.ಆನಂದ, ದಿನೇಶ್ ಭಂಡಾರಿ ಮೊದಲಾದವರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply