Header Ads
Header Ads
Breaking News

ಬಂಟ್ವಾಳದಲ್ಲಿ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ : ಪುರಸಭಾ ಅಧಿಕಾರಿಗಳನ್ನೇ ಪ್ರಶ್ನೆ ಮಾಡಿದ ದಲಿತ ಮುಖಂಡರು

ಎಸ್‌ಸಿ ಎಸ್‌ಟಿ ಗಳ ಅಭಿವೃದ್ದಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸಲಾಗುತ್ತಿದೆ. ಸಾಮಾನ್ಯ ಕಾಮಗಾರಿಗೆ ಸರಕಾರದಿಂದ ಅನುದಾನ ಬರುವುದಿಲ್ಲವೇ? ಎಸ್‌ಸಿ ಎಸ್‌ಟಿಗಳ ಅನುದಾನವೇ ಬೇಕೆ? ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುರಸಭಾ ವ್ಯಾಪ್ತಿಯ ಎಸ್‌ಸಿ ಎಸ್‌ಟಿ ಕುಂದು ಕೊರತೆ ನಿವಾರಣ ಸಭೆಯಲ್ಲಿ ದಲಿತ ಮುಖಂಡ ಗಂಗಾಧರ ಮಿತ್ತ ಪರಾರಿ ಮಾತನಾಡಿ ಎಸ್‌ಸಿ ಎಸ್‌ಟಿ ಸಮುದಾಯದ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸರಕಾರದ ಸುತ್ತೋಲೆಯಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದಾಗ ಈಗ ಸರಕಾರವೇ ಸರಿ ಇಲ್ಲ ಸರಕಾರದ ಸುತ್ತೋಲೆ ಸರಿ ಇರುತ್ತದೆಯೇ ಎಂದು ಲೇವಡಿ ಮಾಡಿದರು.

ಈ ಹಿಂದೆಲ್ಲಾ ಪುರಸಭೆಯ ವತಿಯಿಂದ ನೀರಿನ ಟ್ಯಾಂಕ್, ಕಪಾಟು, ರಿಕ್ಷಾ ಮೊದಲಾದ ಸವಲತ್ತುಗಳನ್ನು ದಲಿತರಿಗೆ ನೀಡಲಾಗುತ್ತಿತ್ತು. ಕಳೆದ 5 ವರ್ಷಗಳಿಂದ ಇಂತಹ ಸವಲತ್ತುಗಳು ಸಿಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಹಿಂದೆ ಇಂತಹ ಸವಲತ್ತುಗಳನ್ನು ನೀಡಲು ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಈಗ ಅಂತಹ ಅವಕಾಶ ಇಲ್ಲ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಪ್ರತೀ ದಲಿತರ ಮನೆಗೆ ಸೋಲಾರ್ ಸೌಲಭ್ಯ ಒದಗಿಸಿ ಕೊಡುವಂತೆ ಸಭೆ ಆಗ್ರಹಿಸಿತು.ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಪ್ರಬಂಧಕಿ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *