Header Ads
Header Ads
Breaking News

ಬಂಟ್ವಾಳದಲ್ಲಿ ಸಂಜೆಯ ವೇಳೆ ಗಾಳಿ ಮಳೆ ತೀವ್ರಗೊಂಡಿದೆ. ಇದರಿಂದಾಗಿ ನೆರೆಯೂ ಹೆಚ್ಚಾಗಿ ಬಂಟ್ವಾಳ ತಾಲೂಕಿನ ಭಾಗಶಃ ಪ್ರದೇಶ ಜಲಾವೃತಗೊಂಡಿತು.

ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ, ಪೊಸಳ್ಳಿಯ ಕುಲಾಲ ಸಮುದಾಯ ಭವನ, ಬಸ್ತಿಪಡ್ಪು ರಸ್ತೆ, ಬ್ರಹ್ಮರಕೂಟ್ಲುವಿನ ಬ್ರಹ್ಮ ಸನ್ನಿಧಿ ಜಲಾವೃತ ಗೊಂಡಿತು. ಗೂಡಿನ ಬಳಿಯ ಸುಣ್ಣದ ಗೂಡಿನ ಮನೆಗಳು ಸಂಪೂರ್ಣ ಮುಳುಗಡೆಯಾಗಿ ಛಾವಣಿ ಮಾತ್ರ ಕಾಣುತ್ತಿತ್ತು. ಪೊಲೀಸರು ಸುರಕ್ಷತೆಯ ದೃಷಿಯಿಂದ ಮುಳುಗಡೆಯಾಗಿರುವ ರಸ್ತೆಗಳಲ್ಲಿ ವಾಹನ ಸಂಚರಿಸದಂತೆ ಬ್ಯಾರಕೇಡ್ ಅಳವಡಿಸಿ ಕಾವಲು ಕಾದರು.

ಅಗ್ನಿಶಾಮಕ ದಳದ ವಾಹನ ಬೋಟ್ ನೊಂದಿಗೆ ಕಾರ್ಯ ಸನ್ನದ್ದವಾಗಿತ್ತು. ನೆರೆ ನೋಡುವ ಕುತೂಹಲದಿಂದ ಸೇತುವೆ, ನದಿ ತೀರದ ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಉಂಟಾಯಿತು. ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಏದಿಸಿದ್ದರಿಂದ ಬಂಟ್ವಾಳ- ಬೆಳ್ತಂಗಡಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಯಿತು.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗೂಡಿನ ಬಳಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಪರಿಶೀಲಿಸಿ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸುವ ಬಗ್ಗೆ ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಆದೇಶಿಸಿದರು. 

Related posts

Leave a Reply