Header Ads
Header Ads
Breaking News

ಬಂಟ್ವಾಳದಲ್ಲೂ ಮುಂದುವರಿದ ಮಳೆಯ ಅಬ್ಬರ. ಇಂದು ಮತ್ತೆ ಉಕ್ಕಿ ಹರಿದ ನದಿ.

ಬಂಟ್ವಾಳ: ಬಂಟ್ವಾಳದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಇಂದು ಮತ್ತೆ ನದಿ ಉಕ್ಕಿ ಹರಿದಿದ್ದು ನದೀ ತೀರದ ತಗ್ಗು ಪ್ರದೇಶಗಳೆಲ್ಲಾ ಮಯಳುಗಡೆಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಘಟ್ಟಪ್ರದೇಶ ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಧಾರಕಾರ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ಮತ್ತೆ ನೀರಿ ಉಕ್ಕಿ ಬಂದಿದೆ. ಬೆಳಗ್ಗಿನ ವೇಳೆ ನದಿ ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ಮನೆ, ರಸ್ತೆ ಸಹಿತ ಕೃಷಿ ಭುಮಿ ಮುಳುಗಡೆಯಾಗಿದೆ.

ಪಾಣೆಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ಪಾಣೆಮಂಗಳೂರು- ಮೆಲ್ಕಾರ್ ಸಂಪರ್ಕದ ರಸ್ತೆ ಮುಳುಗಡೆಯಾಗಿ ವಾಹನ ಸವಾರರು ತೊಂದರೆ ಪಡುವಂತಾಯಿತು. ಕಂಚುಕಾರ ಪೇಟೆ ಬಳಿ ರಸ್ತೆಗೆ ನೀರು ಬಿದ್ದು ಬಂಟ್ವಾಳ- ಪಾಣೆಮಂಗಳೂರು ಸಂಪರ್ಕ ಕಡಿತಗೊಂಡಿತು. ನಂದಾವರ ಬಳಿ ಅಡಿಕೆ ತೋಟ ಹಾಗೂ ಶಾಲಾ ಮೈದಾನ ಮುಳೆಗಡೆಗೊಂಡಿತು. ನೆರೆ ಪೀಡಿತ ಸ್ಥಳಕ್ಕೆ ತಹಸೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯಾಧಿಕಾರಿಗಳ ತಂಡ ಭೇಟಿ ನೀಡಿ ಮುಂಜಾಗೃತ ಕ್ರಮಗಳನ್ನು ಕೈಗೊಂಡಿತು. 8.5 ಅಪಾಯದ ಮಟ್ಟದವಾಗಿದ್ದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನದಿ ನೀರಿನ ಮಟ್ಟ 8.8ಮೀಟರ್ ದಾಖಲಾಗಿತ್ತು.

Related posts

Leave a Reply