Header Ads
Breaking News

ಬಂಟ್ವಾಳದಲ್ಲೂ ವ್ಯಾಪಾರ-ವ್ಯವಹಾರ ಸಂಪೂರ್ಣ ಸ್ತಬ್ಧ

ಸರ್ಕಾರದ ಸೂಚನೆಯಂತೆ ಶನಿವಾರ ರಾತ್ರಿಯಿಂದಲೇ ಜನಸಂಚಾರ ನಿರ್ಬಂಧಿಸಿದ  ಕಾರಣ ಇಂದು ಬೆಳಗ್ಗೆಯೇ ಬಂಟ್ವಾಳ, ಬಿ.ಸಿ.ರೋಡ್ ಸಹಿತ ಪ್ರಮುಖ ಜಂಕ್ಷನ್ ಸ್ತಬ್ದಗೊಂಡಿತ್ತು. ಬೆಳಗ್ಗೆಯೇ ತೆರೆಯುತ್ತಿದ್ದ ಕೆಲ ಅಂಗಡಿಗಳು ಬಾಗಿಲು ಹಾಕಿದ್ದರೆ, ಹಾಲು, ಪತ್ರಿಕಾ ವಿತರಕರು ಕಂಡುಬಂದರು. ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ ಸಹಿತ ಬಂಟ್ವಾಳದಲ್ಲೂ ಕಟ್ಟುನಿಟ್ಟಿನ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಮತ್ತು ಬಿ.ಮೂಡ ಗ್ರಾಮಗಳಲ್ಲಿ ಕೊರೊನಾ ಅಬ್ಬರಿಸಿದ್ದು, ಕಳೆದ ಎರಡುವರೆ ತಿಂಗಳಲ್ಲಿ ನಾಲ್ಕು ಸಾವುಗಳು ಪುರಸಭೆ ವ್ಯಾಪ್ತಿಯಲ್ಲಿಯೇ ಸಂಭವಿಸಿವೆ. 

Related posts

Leave a Reply

Your email address will not be published. Required fields are marked *