Header Ads
Breaking News

ಬಂಟ್ವಾಳದ ಅಭಿವೃದ್ಧಿ ಕಾಮಗಾರಿಗಳಿಗೆ ಪುನರ್ ಚಾಲನೆ

ಚುನಾವಣಾ ನೀತಿ ಸಂಹಿತೆಯಿಂದಾಗಿ ಸ್ಥಗಿತಗೊಂಡಿದ್ದ ಬಂಟ್ವಾಳದ ಅಭಿವೃದ್ದಿ ಕಾಮಗಾರಿಗಳು ಮತ್ತೆ ಚಾಲನೆ ಪಡೆದುಕೊಂಡಿದೆ. ಕಳೆದ ಸರಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅಂಬೇಡ್ಕರ್ ಭವನ, ಇಂದಿರಾ ಕ್ಯಾಂಟೀನ್, ಪಂಜೆ ಮಂಗೇಶ್‌ರಾವ್ ಸಭಾ ಭವನ, ಅಜಿಲಮೊಗರುವಿನ ಸೌಹಾರ್ದ ಸೇತುವೆ ಸಹಿತ ಹಲವಾರು ಅಭಿವೃದ್ದಿ ಯೋಜನೆಗಳ ನಿರ್ಮಾಣ ಕಾರ್ಯ ಪುನಾರಂಭಗೊಂಡಿದೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾಲಾವಧಿಯಲ್ಲಿ ಬಂಟ್ವಾಳಕ್ಕೆ ಸಾಕಷ್ಟು ಅಭಿವೃದ್ದಿ ಯೋಜನೆಗಳು ಮಂಜೂರುಗೊಂಡಿದ್ದವು. ಕೆಲವು ಕಾಮಗಾರಿಗಳ ಕಟ್ಟಡ ನಿರ್ಮಾಣ ಕಾರ್ಯ ಭಾಗಶಃ ಪೂರ್ಣಗೊಂಡಿದ್ದರೂ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ರಾಜ್ಯದಲ್ಲಿ ನೂತನ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಅಭಿವೃದ್ದಿ ಕಾಮಗಾರಿಗಳು ಚುರುಕು ಪಡೆದುಕೊಂಡಿದೆ.

 ತಾಲೂಕು ಕೇಂದ್ರ ಸ್ಥಾನವಾದ ಬಿ.ಸಿ.ರೋಡಿನಲ್ಲಿ 300 ಲಕ್ಷ ರುಪಾಯಿ ಮೂಲ ಯೋಜನಾ ವೆಚ್ಚದಡಿ4806.12 ಚದರ ಅಡಿ ವಿಸ್ತೀರ್ಣದ ಭವ್ಯವಾದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. ಚುನಾವಣೆ ಪೂರ್ವದವರೆಗೆ ತಳ ಅಂತಸ್ತಿನ ಕಾಮಗಾರಿ ನಡೆದಿದ್ದು ಇದೀಗ ಮುಂದುವರಿದ ಕಾಮಗಾರಿ ಆರಂಭಗೊಂಡಿದೆ. ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಬಳಿಯಲ್ಲಿ ಇಂದಿರ ಕ್ಯಾಂಟೀನ್ ನಿರ್ಮಾಣಗೊಳ್ಳುತ್ತಿದೆ. ಚುನಾವಣೆಯ ಬಳಿಕ ಮತ್ತೆ ಕ್ಯಾಂಟಿನ್ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪುರಸಭೆಯ ಜೆಸಿಬಿ ಬಳಸಿ ಕಾಮಗಾರಿ ನಡೆಸಿದ ಹಿನ್ನಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿಯನ್ನು ಚುನಾವಣಾಧಿಕಾರಿ ವರ್ಗಾವಣೆ ಗೊಳಿಸಿದ್ದರು. ಚುನವಣೆ ಮುಗಿದು ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ನ ಕೆಲಸವೂ ಪ್ರಾರಂಭಗೊಂಡಿದೆ.

Related posts

Leave a Reply