Breaking News

ಬಂಟ್ವಾಳದ ಕಲ್ಲಡ್ಕದಲ್ಲಿ ಬಯ್ಕ್‌ಗೆ ಬಡಿದ ಲಾರಿ, ರಸ್ತೆ ಅಪಘಾತದಲ್ಲಿ ಮೂವರ ಮರಣ

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಮೀನು ಸಾಗಾಟದ ಖಾಲಿ ಕಂಟೈನರ್ ಮಾಣಿ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಸಂಬಂಧಿಕರಾದ ಹರೀಶ್ ನಾಯ್ಕ್, ರಕ್ಷಿತ್ ಕುಮಾರ್ ಮತ್ತು ನಾರಾಯಣ ಸಾವನ್ನಪ್ಪಿದ್ದಾರೆ.
ಹರೀಶ್ ನಾಯ್ಕ್ ಪೆರಾಜೆ ಗ್ರಾಮದ ಪಾಲ್ಯ ನಿವಾಸಿ ಈಶ್ವರ ನಾಯ್ಕ್ ಎಂಬವರ ಪುತ್ರ, ಇವರು ಸೆಂಟರಿಂಗ್ ಕೆಲಸ ಮಾಡಿಕೊಂಡಿದ್ದವರು. ಮೃತಪಟ್ಟ ನಾರಾಯಣ್ ಹರೀಶ್ ಅವರ ಅಕ್ಕನ ಗಂಡ ಹಾಗೂ ರಕ್ಷಿತ್ ಕುಮಾರ್ ಹರೀಶ್ ಅವರ ಸಹೋದರನ ಮಗ. ಮೂವರೂ ಕಾರ್ಕಳ ಸಮೀಪ ಈಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಂಡು ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಂಗಳೂರಿಗೆ ತೆರಳುತ್ತಿದ್ದ ಮೀನು ಸಾಗಾಟದ ಖಾಲಿ ಕ್ಯಾಂಟರ್ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply