Header Ads
Header Ads
Breaking News

ಬಂಟ್ವಾಳದ ಕೆಂಪು ಕಲ್ಲು ಕೋರೆಗೆ ಅಧಿಕಾರಿಗಳ ದಿಢೀರ್ ದಾಳಿ : ಅಪಾರ ಪ್ರಮಾಣದ ಸೊತ್ತು ವಶಕ್ಕೆ ಪಡೆದ ಅಧಿಕಾರಿಗಳು

ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಾದೆ ಕಲ್ಲು ಎಂಬಲ್ಲಿ ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದ್ದ ಕೆಂಪುಕಲ್ಲಿನ ಮೂರು ಕೋರೆಗಳಿಗೆ ಏಕಕಾಲದಲ್ಲಿ ದಿಢೀರ್ ದಾಳಿ ಕಾರ್ಯಾಚರಣೆ ನಡೆದಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಪದ್ಮಶೀ ಹಾಗೂ ಬಂಟ್ವಾಳ ತಹಶೀಲ್ದಾರರಾದ ರಶ್ಮಿ ಎಸ್ ಆರ್ ಇವರ ಜಂಟಿ ನೇತೃತ್ವದಲ್ಲಿ ಕೆಂಪು ಕಲ್ಲು ಕೋರೆಗೆ ದಾಳಿ ನಡೆಸಲಾಗಿರುತ್ತದೆ. ಅಧಿಕಾರಿಗಳ ಸಹಕಾರದೊಂದಿಗೆ ಭಾರೀ ಸೊತ್ತನ್ನು ಸ್ಥಳಕ್ಕೆ ಕ್ರೇನ್ ತರಿಸಿ ಕ್ರೇನ್ ಸಹಕಾರದಿಂದ ಸ್ವತ್ತುಗಳನ್ನು ವಶ ಪಡಿಸಿಕೊಂಡು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದರು.ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಒಂದು ಲಾರಿ ಕಲ್ಲು, ಕಡಿಯಲು ಉಪಯೋಗಿಸುವ ದೊಡ್ಡ ಮೆಷಿನ್ ಯಂತ್ರ ಇನ್ನಿತರ ಕಲ್ಲು ತೆಗೆಯುವ ಇತರ ಸೊತ್ತುಗಳನ್ನು ವಶ ಪಡಿಸಿಕೊಂಡು ಮುಂದಿನ ತನಿಖೆ ನಡೆಸುತಿದ್ದಾರೆ. ದಾಳಿಯ ಸಂದರ್ಭದಲ್ಲಿ ಭೂ ವಿಜ್ಞಾನ ಇಲಾಖೆಯ ಬಿ ಕೆ ಮೂರ್ತಿ, ವಿಟ್ಲ ಠಾಣಾಧಿಕಾರಿಗಳು, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಕರೋಪಾಡಿ ಗ್ರಾಮ ಲೆಕ್ಕಾಧಿಕಾರಿ ಅನಿಲ್ ಕುಮಾರ್ ಸಿಬ್ಬಂದಿಗಳಾದ ಮೊಯಿದಿಕುಂಞಿ, ಗಿರೀಶ್, ಶಿವಪ್ರಸಾದ್ ಸಹಕರಿಸಿದರು.

Related posts

Leave a Reply

Your email address will not be published. Required fields are marked *