Header Ads
Header Ads
Breaking News

ಬಂಟ್ವಾಳದ ಗಾಣದಮೂಲೆಯಲ್ಲಿ ಅಕ್ರಮ ಗಣಿಗಾರಿಕೆ:ವೀರಕಂಭ ಗ್ರಾಮಸ್ಥರಿಂದ ಆಕ್ರೋಶ

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಗಾಣದಮೂಲೆ ಎಂಬಲ್ಲಿ ಸ.ನಂ.58/2 ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವ ಹುನ್ನಾರ ನಡೆಯುತ್ತಿದ್ದು, ಜಲ್ಲಿ ಕೃಷರ್‍ಗಾಗಿ ಈಗಾಗಲೇ ಸ್ಥಳದಲ್ಲಿ ದೊಡ್ಡ ಗಾತ್ರದ ಯಂತ್ರಗಳು ಸ್ಥಳದಲ್ಲಿ ಬಂದು ನಿಂತಿದ್ದರಿಂದ ನಮ್ಮ ಅನುಮಾನಕ್ಕೆ ಪುಷ್ಠಿ ನೀಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರಾದ ಮಹೇಶ್ ಶೆಟ್ಟ, ಪ್ರದೀಪ್ ಆಳ್ವ, ಐತಪ್ಪ ಶೆಟ್ಟಿ, ಅಬ್ದುಲ್ ಹಮೀದ್, ರಾಮಣ್ಣ ವಿಟ್ಲ, ಶಶಿಂದ್ರ ಶೆಟ್ಟಿ ಮೊದಲಾದವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ವೀರಕಂಭ ಗ್ರಾಪಂ.ಕಟ್ಟಡದ ಹಿಂಭಾಗದಲ್ಲಿಯೇ ನಡೆಯಬಹುದಾದ ಈ ಅಕ್ರಮ ಕಲ್ಲುಗಣಿಗಾರಿಕೆಯ ಜಮೀನು ಇದ್ದು, ಅಕ್ರಮ- ಸಕ್ರಮದಲ್ಲಿ ಈ ಜಮೀನನ್ನು ಸ್ಥಳೀಯರಾದ ವಸಂತ ಮತ್ತು ಕೃಷ್ಣಪ್ಪಪೂಜಾರಿ ಎಂಬವರು ಪಡೆದುಕೊಂಡಿದ್ದಾರೆ. ಈ ಜಮೀನಿನ ಪಕ್ಕ ಪಂಚಾಯತ್ ಕಚೇರಿ ಮಾತ್ರವಲ್ಲ,ದೈವಸ್ಥಾನ, ಸೊಸೈಟಿ, ಅಂಚೆಕಚೇರಿ, ಕಲ್ಲಡ್ಕ-ಕಾಂಞಗಾಡ್ ರಾಜ್ಯ ಹೆದ್ದಾರಿ, ಅರಣ್ಯ ಪ್ರದೇಶ ಮತ್ತು ಹಲವಾರು ವಾಸ್ತವ್ಯದ ಮನೆಗಳಿವೆ ಎಂದರು. ಕಲ್ಲು ಗಣಿಗಾರಿಕೆಗೆ 2017-18ರಲ್ಲಿ ಸ್ಪೋಟಕ ಬಳಸದೆ ಕಲ್ಲು ಬಂಡೆ ತೆರವುಗೊಳಿಸಿ ಸಾಗಾಟ ಮಾಡಲು ಗ್ರಾಪಂ ನಿರಾಕ್ಷೇಪಣಾ ಪತ್ರ ನೀಡಿದ್ದರೆ, ಗಣಿ ಲಾಖೆ ಕ್ರಷರ್ ಗೆ ಅನುಮತಿ ನೀಡಿರುವುದಿಲ್ಲ ಎಂದು ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಿದೆ ಆದರೆ ಸ್ಥಳದಲ್ಲಿ ದೊಡ್ಡ ಗಾತ್ರದ ಯಂತ್ರಗಳ ಬಂದು ನಿಂತಿದ್ದು, ರಸ್ತೆ ಕೂಡ ನಿರ್ಮಿಸಲಾಗಿದೆ.

ಅಕ್ರಮವಾಗಿ ಗಣಿಗಾರಿಕೆ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದ ಅವರು ಈ ಬಗ್ಗೆ ಜಿಲ್ಲಾಧಿಕಾರಿ, ಗಣಿಇಲಾಖೆ, ಬಂಟ್ವಾಳ ತಹಶೀಲ್ದಾರ್ ಸಹಿತ ಎಲ್ಲಾ ಇಲಾಖೆಗಳಿಗೂ ಮನವಿ ಮಾಡಿದ್ದು ಯಾವುದೇ ಸ್ಪಂದನ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಅಕ್ರಮ ಸಕ್ರಮ ಜಮೀನಿನಲ್ಲಿ ಕೃಷಿ ಮಾಡಲು ಮಾತ್ರ ಅವಕಾಶವಿದ್ದು, ಗಣಿಗಾರಿಕೆ ಮಾಡುವಂತಿಲ್ಲ,ಇದನ್ನು ತಕ್ಷಣ ತಹಶೀಲ್ದಾರರು ತಡೆ ಹಿಡಿಯಬೇಕು ಇಲ್ಲದಿದ್ದಲ್ಲಿ ತಾಲೂಕು ಕಚೇರಿ, ಗ್ರಾಮಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಮಣ್ಣ ವಿಟ್ಲ ಈ ಸಂದರ್ಭ ಎಚ್ಚರಿಸಿದರು.

Related posts

Leave a Reply