Header Ads
Breaking News

ಬಂಟ್ವಾಳದ ನಂದನಹಿತ್ತಿಲು ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಪಾಪೆಬಂಡಿಯ ಪೇಟೆ ಸವಾರಿ

ಬಂಟ್ವಾಳ: ಬಂಟ್ವಾಳ ಪೇಟೆಯ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಶ್ರೀ ವೈದ್ಯನಾಥ ದೈವದ ನೇಮೋತ್ಸವ , ಕಂಚಿಲ ಸೇವೆ ಹಾಗೂ ಶ್ರೀ ವೈದ್ಯನಾಥ ದೈವದ ನೂತನ ಪಾಪೆಬಂಡಿಯ ಪೇಟೆ ಸವಾರಿ ವಿಜ್ರಂಭಣೆಯಿಂದ ನಡೆಯಿತು.
ಅಪಾರ ಭಕ್ತ ಜನರ ಸೇರುವಿಕೆಯೊಂದಿಗೆ ರಾತ್ರಿ 11 ಗಂಟೆಯ ವೇಳೆಗೆ ಶ್ರೀ ವೈದ್ಯನಾಥ ದೈವದ ಗಗ್ಗರ ಸೇವೆ ನಡೆಯಿತು. ದೈವದ ಕಂಚಿಲ್ ಸೇವೆಯಲ್ಲಿ ಅನೇಕ ಮಂದಿ ತಮ್ಮ ಪುಟ್ಟ ಮಕ್ಕಳೊಂದಿಗೆ ಪಾಲ್ಗೊಂಡರು. ಮುಂಜಾನೆ 4 ಗಂಟೆಯ ಸುಮಾರಿಗೆ ನೂತನವಾಗಿ ನಿರ್ಮಾಣಗೊಂಡ ಪಾಪೆ ಬಂಡಿಯೊಂದಿಗೆ ದೈವದ ಪೇಟೆ ಸವಾರಿ ದೈವಸ್ಥಾನದಿಂದ ಆರಂಭಗೊಂಡು ಬಂಟ್ವಾಳ ಮಾರ್ಕೆಟ್ ರಸ್ತೆಯಲ್ಲಿರುವ ಗಡಿಕಲ್ಲುವರೆಗೆ ಸಾಗಿ ಮತ್ತೆ ಕ್ಷೇತ್ರಕ್ಕೆ ಹಿಂತಿರುಗಿ ಗಂಧ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭ ಬಾಳಿಗ ಮನೆತನದ ಶ್ರೀ ಸುಧೀರ್ ಬಾಳಿಗ, ಪೊಳಲಿ ಗಿರಿಪ್ರಕಾಶ್ ತಂತ್ರಿ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಅಂಚನ್, ಕೋಶಾಧಿಕಾರಿ ಲೋಕೇಶ್ ಬಂಗೇರ ಮಾಣಿ, ವಿವಿಧ ಮನೆತನದ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು, ಸಂಜೀವ ಪೂಜಾರಿ ಗಾಣದಪಡ್ಪು, ಲೋಕನಾಥ ಪೂಜಾರಿ ಬಡೆಕೊಟ್ಟು ಮೊದಲಾದವರು ಹಾಜರಿದ್ದರು. ಶಾಸಕ ರಾಜೇಶ್ ನಾೈಕ್, ಮಾಜಿ ಸಚಿವ ಬಿ.ರಮನಾಥ ರೈ ಕ್ಷೇತ್ರಕ್ಕೆ ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.

Related posts

Leave a Reply

Your email address will not be published. Required fields are marked *