Header Ads
Breaking News

ಬಂಟ್ವಾಳದ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ : ಶಾಸಕ ರಾಜೇಶ್ ನಾಯ್ಕ್ ಭೇಟಿ, ಪರಿಶೀಲನೆ

ಬಂಟ್ವಾಳ ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನೆ ನಡೆದಿದೆ. ಶಾಲೆಯ ಕುಸಿದ ಕಟ್ಟಡವು ಹಳೆಯದಾಗಿದ್ದು, ಕಳೆದ ಬಾರಿ ಅದರ ಮೇಲ್ಛಾವಣಿ ದುರಸ್ತಿ ಮಾಡಲಾಗಿತ್ತು. ಪ್ರಸ್ತುತ ಕಟ್ಟಡಕ್ಕೆ ಪೂರ್ತಿ ಹಾನಿಯಾಗಿದ್ದು, ಘಟನೆಯ ಕುರಿತು ಸ್ಥಳೀಯರು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿ ವರ್ಗಕ್ಕೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಶಾಲೆಗೆ ರಜಾ ದಿನವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಶಾಲೆಗೆ ನೂತನ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯತುಂಗಪ್ಪ ಬಂಗೇರಾ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್, ಕಂದಾಯ ನೀರೀಕ್ಷಕರಾದ ನವೀನ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ, ಗ್ರಾಮಕರಣಿಕರಾದ ಚನ್ನಬಸವ, ಸುರೇಶ್ ಮೈರಾ,ಬೊಳ್ಳುಕಲ್ಲು ನಾರಾಯಣ ಪೂಜಾರಿ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *