Header Ads
Header Ads
Header Ads
Breaking News

ಬಂಟ್ವಾಳದ ನೇತ್ರಾವತಿ ನದಿ ತಟದಲ್ಲಿ ರಿಯಲ್‌ಮಿಕ್ಸ್ ಸಿಪಿಎಲ್: ಪ್ರೇಕ್ಷಕರನ್ನು ನಗೆಗಡದಲ್ಲಿ ತೇಲಿಸಿದ ಕಾಮಿಡಿ ಪ್ರೀಮಿಯರ್ ಲೀಗ್

ಬಂಟ್ವಾಳದ ನೇತ್ರಾವತಿ ನದಿ ತಟದಲ್ಲಿ, ವಟಪುರ ಕ್ಷೇತ್ರ ಪ್ರಖ್ಯಾತಿಯ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಸಾನಿಧ್ಯದಲ್ಲಿ ಭಾನುವಾರ ರಾತ್ರಿ ನಡೆದ ವಿ4ನ್ಯೂಸ್ ರಿಯಲ್ ಮಿಕ್ಸ್ ಕಾಮಿಡಿ ಪ್ರೀಮಿಯರ್ ಲೀಗ್ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿದೆ.


ಎಂಟು ತಂಡಗಳ ಕಾಮಿಡಿ ಪ್ರದರ್ಶನಗಳು ಜನರ ಮನ ಗೆದ್ದಿದ್ದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಬಂಟ್ವಾಳ ದಸರ ೫೦ನೇ ವರ್ಷಚರಣೆ ನಡೆಸುತ್ತಿದ್ದು ಈ ಸಂದರ್ಭ ಕಾಮಿಡಿ ಪ್ರೀಮಿಯರ್ ಲೀಗ್ ಪ್ರೇಕ್ಷರಿಗೆ ನಗುವಿನ ಕಚಗುಳಿ ನೀಡಿತು.
ಬಂಟ್ವಾಳದ ಪ್ರತಿಷ್ಠಿತ ವಿಎನ್‌ಆರ್ ಗೋಲ್ಡ್ ಮತ್ತಿತರ ಸಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಎಂಟು ತಂಡಗಳು ಅಧ್ಭುತ ಹಾಸ್ಯ ತುಣುಕು ಪ್ರದರ್ಶಿಸಿ ವೀಕ್ಷಕರಿಗೆ ಮನೋರಂಜನೆ ನೀಡಿತು.


ಈ ಸಂದರ್ಭ ವಿಎನ್‌ಆರ್ ಗೋಲ್ಡ್‌ನ ಮಾಲಕ ಬಿ.ನಾಗೇಂದ್ರ ಬಾಳಿಗ ಕಲಾವಿದರಿಗೆ ಸೀಸನ್ ಅವಾರ್‍ಡ್ ನೀಡಿ ಮಾತನಾಡಿ ಜನರ ಒತ್ತಡದ ಜೀವನದ ಮಧ್ಯೆ ಜನರಿಗೆ ಉಲ್ಲಾಸ ನೀಡಲು ಇಂತಹ ಹಾಸ್ಯ ಕಾರ್ಯಕ್ರಮಗಳ ಅಗತ್ಯವಿದೆ. ಅಂತಹ ಕಾರ್ಯವನ್ನು ವಿ೪ ನ್ಯೂಸ್ ಮಾಡುತ್ತಿದೆ ಎಂದು ತಿಳಿಸಿದರು.
ವಿ೪ ನ್ಯೂಸ್‌ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಪ್ರಮುಖರಾದ ವಿದ್ಯಾ ನಾಗೇಂದ್ರ ಬಾಳಿಗ, ನರೇಶ್ ಬಾಳಿಗ, ರಾಮರಾಯ ಕಿಣಿ, ಲಕ್ಷ್ಮಣ್ ಅಚುತ ಬಾಳಿಗ, ಡಾ. ನಿದರ್ಶ್ ಹೆಗಡೆ, ಸೂರಜ್ ಭಟ್ ಮೊದಲಾದವರು ಕಲಾವಿದರಿಗೆ ಸೀಸನ್ ಅವಾರ್‍ಡ್ ಹಸ್ತಾಂತರಿಸಿದರು. ವಸಂತ ಪ್ರಭು ಹಾಗೂ ನಾರಾಯಣ ಕಾಮತ್ ಅತಿಥಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಶಶಿರಾಜ ರಾವ್ ಕಾವೂರು, ಆಶಿಕಾ ಸುವರ್ಣ, ಮೈಮ್ ರಾಮ್‌ದಾಸ್ ತೀರ್ಪುಗಾರಾಗಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply