Header Ads
Header Ads
Header Ads
Breaking News

ಬಂಟ್ವಾಳದ ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಸಮಾಧಾನ


ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿರುವ ಕಸ ವಿಲೇವಾರಿಯ ಅಸಮರ್ಪಕತೆಯ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕವೂ ಬಂಟ್ವಾಳ ಪುರಸಭೆ ಎಚ್ಚೆತ್ತುಕೊಂಡಿಲ್ಲ. ಕಳೆದ ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಾಜ್ಯ ರಾಶಿ ಹಾಕಿರುವ ಬಗ್ಗೆ ಪುರಸಭಾ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಿ.ಸಿ.ರೋಡಿನ ಬ್ರಹ್ಮಶ್ರೀ ವೃತ್ತದ ಬಳಿ ವಾಹನಗಳಿಂದ ಕಸ ವರ್ಗಾವಣೆ ಮಾಡುವುದನ್ನು ಹಾಗೂ ರಸೆ ಬದಿಯೇ ಕಸ ರಾಶಿ ಹಾಕಿರುವುದನ್ನು ಒಂದೇ ದಿನದಲ್ಲಿ ತೆರವುಗೊಳಿಸುವಂತೆ ಸೂಚಿಸಿ ವಾರ ಸಮೀಪಿಸಿದರೂ ಕೂಡ ಕಸದ ರಾಶಿ ಅಲ್ಲಿಯೇ ಇದೆ. ಮನೆಮನೆಯಿಂದ ಸಂಗ್ರಹಿ ತಂದ ಕಸವನ್ನು ನೇರ ಲಾರಿಗಳಿಗೆ ತುಂಬುವ ಬದಲು ರಸ್ತೆ ಪಕ್ಕ ರಾಶಿ ಹಾಕುವುದರಿಂದ ಅದು ಕೊಳೆತು ದುರ್ನಾತ ಬೀರುತ್ತಿದೆ. ಪರಿಸರ ಅಧಿಕಾರಿಗಳ ಭೇಟಿಯ ಬಳಿಕವಾದರೂ ಪುರಸಭೆ ಎಚ್ಚೆತ್ತುಕೊಳ್ಳಬಹುದು ಎನ್ನುವ ನಿರೀಕ್ಷೆ ಬಂಟ್ವಾಳ ಪುರಸಭೆಯ ನಾಗರಿಕರಲ್ಲಿತ್ತು. ಆದರೇ ಪುರಸಭೆ ಅಧಿಕಾರಿಗಳು ಮತ್ತೆ ತಮ್ಮ ನಿರ್ಲಕ್ಷ ಧೋರಣೆಯನ್ನು ಮುಂದಿವರೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

Related posts

Leave a Reply