Header Ads
Header Ads
Breaking News

ಬಂಟ್ವಾಳದ ಮುಲಾರಪಟ್ಣದ ಫಲ್ಗುಣಿ ನದಿಯಲ್ಲಿ ಐವರು ನೀರುಪಾಲು ಇಂದು ಮುಂಜಾನೆ ಓರ್ವನ ಮೃತದೇಹ ಪತ್ತೆ ಉಳಿದವರಿಗಾಗಿ ಶೋಧ ಕಾರ್ಯ

ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ಸೋಮವಾರ ಬೆಳಗ್ಗೆ ಫಲ್ಗುಣಿ ನದಿಯಲ್ಲಿ ಈಜಲೆಂದು ತೆರಳಿದ್ದ ಐವರು ಬಾಲಕರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಗಳವಾರ ಬೆಳಗ್ಗೆಯಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಓರ್ವನ ಶವ ಪತ್ತೆಯಾಗಿದೆ.

ನಾಪತ್ತೆಯಾದ ಬಾಲಕರು ಶುಂಟಿಹಿತ್ಲು ನಿವಾಸಿ ಅಶ್ರಫ್ ಅವರ ಪುತ್ರ ಅಸ್ಲಾಂ(17),ಶರೀಫ್ ಅವರ ಪುತ್ರ ರಮೀಝ್(16),ಹಂಝ ಅವರ ಪುತ್ರ ಅಜಾಮತ್(15),ಶರೀಫ್ ಎನ್ನುವವರ ಪುತ್ರ ಮುಭಾಷಿರ್(16),ಮಹಮದ್ ಅವರ ಪುತ್ರ ಸಮಾದ್ (17) ಎಂದು ತಿಳಿದು ಬಂದಿದೆ.

ಸೋಮವಾರ 11 ಗಂಟೆಯ ವೇಳೆಗೆ ಐವರೂ ಜೊತೆಯಲ್ಲಿ ಈಜಲು ತೆರಳಿದ್ದು, ರಾತ್ರಿಯಾದರೂ ಮನೆಗೆ ಬರಲಿಲ್ಲ. ಅನುಮಾನಗೊಂಡ ಪೋಷಕರು ಮೊಬೈಲ್‌ಗೆ ಕರೆ ಮಾಡಿದ್ದಾರೆ. ಫೋನ್‌ಗಳು ರಿಂಗ್ ಮಾತ್ರ ಆಗಿವೆ. ಹುಡುಕಾಟಕ್ಕಿಳಿದಾಗ ನದಿಯ ಬಳಿ ಬಟ್ಟೆಗಳು ಪತ್ತೆಯಾಗಿದ್ದು, ನೀರು ಪಾಲಾಗಿರುವ ಶಂಕೆಯಲ್ಲಿ ಹುಡುಕಾಟಕ್ಕಿಳಿಯಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಶೋಧಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದಾರೆ.