
ಬಂಟ್ವಾಳದ ಲೊರೆಟ್ಟೊ ಪದವಿನಲ್ಲಿರುವ ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅವರ ಆದೇಶದ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕ್ರಿಸ್ಮಸ್ ಮುನ್ನದಿನದ ಸಾಯಂಕಾಲದ ಬಲಿಪುಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು. ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು.
ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ, ವಂದನೀಯ ರೊಯ್ಸಟನ್ ಡಿಸೋಜಾ ರವರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಪ್ರಸಾದ ಅರ್ಪಿಸಿದರು. ಕೊವಿಡ್ನ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಬಲಿಪೂಜೆಯಲ್ಲಿ ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಉದ್ದೇಶದಿಂದ ಆಸನದ ವ್ಯವಸ್ಥೆ ಮಾಡಿ ಚರ್ಚ್ ಅವರಣದಲ್ಲಿ ದೊಡ್ಡ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಸಂಭ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಾಮುಖ್ಯತೆ ಯ ಬಗ್ಗೆ ಧರ್ಮಗುರುಗಳು ಪ್ರವಚನ ನೀಡಿದರು.