Header Ads
Header Ads
Breaking News

ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್‌ನಲ್ಲಿ ವಿಜೃಂಭಣೆಯಿಂದ ಕ್ರಿಸ್ಮಸ್ ಹಬ್ಬದ ಆಚರಣೆ

ಬಂಟ್ವಾಳ: ಜಗತ್ತಿನೆಲ್ಲಡೆ ಪ್ರಭು ಏಸು ಕ್ರಿಸ್ತರ ಜನ್ಮ ದಿನದ ಪ್ರಯುಕ್ತ ಕ್ರಿಸ್‌ಮಸ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟೋ ಪವಿನಲ್ಲಿರುವ ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ಕ್ರೈಸ್ತ ಬಂಧುಗಳು ವಿಜೃಂಭಣೆಯಿಂದ ಆಚರಿಸಿದರು.ಕ್ರಿಸ್‌ಮಸ್ ಮುನ್ನದಿನವಾದ ಸೋಮವಾರ ಸಂಜೆ ನಡೆದ ವಿಶೇಷ ಬಲಿಪುಜೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಆಚರಿಸಿದರು. ಪ್ರಧಾನ ಧರ್ಮ ಗುರುಗಳಾಗಿ ವಂದನೀಯ ಜೊಸ್ಸಿ ಲೋಬೊ ರವರು, ಚರ್ಚ್ ಧರ್ಮಗುರುಗಳಾದ ವಂದನೀಯ ಎಲಿಯಸ್ ಡಿಸೋಜಾ, ವಂದನೀಯ ಸಿಪ್ರಿಯನ್ ಕಾರ್ಲೊ, ವಂದನೀಯ ರೊಯ್ಸಟನ್ ಡಿಸೋಜಾ ರವರು ಹಾಜರಿದು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಬಲಿ ಪೂಜೆ ಅರ್ಪಿಸಿದರು.

ಬಲಿಪೂಜೆಗೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನ್ಮ ದಿನಾಚರಣೆಯ ಪ್ರಮುಖ್ಯತೆಯ ಬಗ್ಗೆ ಪ್ರಧಾನ ಧರ್ಮಗುರುಗಳು ಪ್ರವಚನ ನೀಡಿದರು. ಭಕ್ತದಿಗಳಿಗೆ ಪರಮ ಪ್ರಸಾದವನ್ನು ವಿತರಿಸಲಾಯಿತು. ಚರ್ಚ್ ನ ಪರಮ ಪ್ರಸಾದದ ದಾರಿಯನ್ನು ಲೋರೆಟ್ಟೊ ಫ್ರೆಂಡ್ಸ್ ಇವರ ಪ್ರಯೋಜಕತ್ವದಲ್ಲಿ ವಿದ್ಯುತ್ ಬೆಳಕಿನಿಂದ ಅಲಂಕಾರಗೊಳಿಸಲಾಗಿತ್ತು. ಲೊರೆಟ್ಟೋ ಮಾತಾ ಚರ್ಚ್ ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸುತ್ತಿತ್ತು. ಬಲಿ ಪೂಜೆಯ ಬಳಿಕ ಐಸಿವೈಎಮ್ ನಿಂದ ಸಾಂ ಸ್ಕೃತಿಕ ಕಾರ್ಯಕ್ರಮ ನಡೆಯಿತು. ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಆಕರ್ಷಕ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು. ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಧರ್ಮಗುರುಗಳು ಸರ್ವರರನ್ನು ವಂದಿಸಿ ಆರ್ಶೀರ್ವದಿಸಿದರು.

Related posts

Leave a Reply