Header Ads
Header Ads
Breaking News

ಬಂಟ್ವಾಳದ ಲೋರೆಟ್ಟೊ ಮಾತಾ ಚರ್ಚ್‌ನ ವಾರ್ಷಿಕ ಹಬ್ಬ

ಬಂಟ್ವಾಳ: ಲೋರೆಟ್ಟೊ ಮಾತಾ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಇಂದು ಪರಮ ಪ್ರಸಾದದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯದ ಫ್ಯಾಮಿಲಿ ಲೈಫ್ ಸರ್ವಿಸ್ ಸೆಂಟರ್,ಬಜ್ಜೋಡಿ ಇದರ ನಿರ್ದೇಶಕ ರಾಗಿರುವ ವಂ. ಅನಿಲ್ ಡಿಸೋಜಾ ರವರು ಪ್ರಧಾನ ಧರ್ಮಗುರುಗಳಾಗಿ ನೂರಾರು ಭಕ್ತಾದಿಗಳೂ೦ದಿಗೆ ಬಲಿಪೂಜೆ ಯನ್ನು ಅರ್ಪಿಸಿದರು. ಚರ್ಚ್ ನ ಧರ್ಮಗುರುಗಳಾದ ವಂ. ಎಲಿಯಸ್ ಡಿಸೋಜಾ, ವಂ.ಜೋನ್ ಫೆರ್ನಾಂಡಿಸ್, ಮೀಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಮೈಕೆಲ್ ಸಂತುಮಾಯೆರ್ ಬಲಿಪುಜೆಯಲ್ಲಿ ಪಾಲ್ಗೊಂಡರು.
ಚರ್ಚ್‌ನಿಂದ ಆರಂಭಗೊಂಡ ಪರಮ ಪ್ರಸಾದದ ಮೆರವಣಿಗೆ ಬ್ಯಾಂಡ್ ವಾದ್ಯ,ಸುಡುಮದ್ದಿನ ಹಿಮ್ಮೆಳದೊಂದಿದೆ ಲೋರೆಟ್ಟೊ ಅಂಚೆ ಕಛೇರಿ ಯಿಂದ ಲೋರೆಟ್ಟೊ ಪದವು ಮೂಲಕ ಚರ್ಚ್ ಗೆ ಆಗಮಿಸಿ ಸಮಾಪನಗೊಂಡಿತು.
ಇದೇ ಸಂದರ್ಭದಲ್ಲಿ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಕುಟುಂಬಗಳಿಗೆ ಗೌರವ ಪೂರ್ವಕವಾಗಿ ಮೇಣದ ಬತ್ತಿಯನ್ನು ವಿತರಿಸಲಾಯಿತು. ವಿಶ್ವ ಕಥೊಲಿಕ್ ಧರ್ಮ ಗುರುಗಳಾದ ಪೋಪ್ ಫ್ರಾನ್ಸಿಸ್ ಸೂಚನೆಯ ಮೇರೆಗೆ ” ಲಾವ್ದತೊ ಸಿ ಸಂಡೇ” ಆಚರಣೆ ಮಾಡಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ವೊಳಪಡುವ ಎಲ್ಲಾ ಚರ್ಚ್ ಗಳಲ್ಲಿ ಇಂದು ಸಾಗುವಾನಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪೂರಕವಾಗಿ ಪ್ರದಾನ ಧರ್ಮ ಗುರುಗಳು ಈ ಕಾರ್ಯಕ್ರಮವನ್ನು ಚರ್ಚ್‌ನಲ್ಲಿ ನಡೆಸಿಕೊಟ್ಟರು.

Related posts

Leave a Reply