Header Ads
Header Ads
Breaking News

ಬಂಟ್ವಾಳ:ಸರಕಾರಿ ನೌಕರರಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ

 ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಸರಕಾರಿ ನೌಕರರಿಗಾಗಿ ಕ್ರೀಡಾಕೂಟ ಹಾಗೂ ಸಂಸ್ಕೃತಿಕ ಸ್ಪರ್ಧೆ ಬಂಟ್ವಾಳದ ಎಸ್‌ವಿಎಸ್ ದೇವಾಳ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಧ್ವಜಾರೋಹಣ ನೆರೆವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳ ಮೂಲಕ ಸರಕಾರಿ ನೌಕರರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಸಾಧ್ಯವಿದೆ. ಕ್ರೀಡಾಕೂಟದ ಮೂಲಕ ಸರಕಾರಿ ನೌಕರರ ಮಧ್ಯೆ ಪ್ರೀತಿ, ಸೌಹಾರ್ದತೆ, ಒಗ್ಗಟ್ಟನ್ನು ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.
ಕರ್ನಾಟಕ ರಾಜ್ಯ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆ ಅಧ್ಯಕ್ಷ ಉಮಾನಾಥ ರೈ ಮೇರಾವು ಅಧ್ಯಕ್ಷತೆ ವಹಿಸಿದ್ದರು. ಅವರು ವಿ೪ ನ್ಯೂಸ್‌ನೊಂದಿಗೆ ಮಾತನಾಡಿ ವರ್ಷಕ್ಕೊಮ್ಮೆ ಸರಕಾರಿ ನೌಕರರನ್ನು ಒಟ್ಟು ಸೇರಿಸುವ ಮೂಲಕ ಸಂಘಟನೆಯನ್ನು ಬಲ ಪಡಿಸುವುದರ ಜೊತೆಗೆ ಸರಕಾರಿ ನೌಕರರಲಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕುಮಟ್ಟದಲ್ಲಿ ವಿಜೇತರಾದ ನೌಕರರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವೂ ಇದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಎಸ್‌ವಿಎಸ್ ದೇವಾಳ ವಿದ್ಯಾಸಂಸ್ಥೆಗಳ ಸಂಚಾಲಕ ಎ. ಗೋವಿಂದ ಪ್ರಭು, ತಹಶೀಲ್ದಾರ್ ಪುರಂದರ ಹೆಗ್ಡೆ, ಶಿಕ್ಷಣಾಧಿಕಾರಿ ಶಿವಪ್ರಕಾಶ್, ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್‌ನಾಯಕ್ ರಾಯಿ, ಪಂಚಣಿದಾರರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಮೊದಲಾದವರು ಹಾಜರಿದ್ದರು. ಬಳಿಕ ಓಟ, ಭಾವಗೀತೆ ಮೊದಲಾದ ಕ್ರೀಡಾಕೂಟಗಳು ನಡೆದವು. ಸರಕಾರಿ ನೌಕರರರು ಉತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

Related posts

Leave a Reply