Header Ads
Header Ads
Breaking News

ಬಂಟ್ವಾಳ:ಸುಜೀರು ಸರಕಾರಿ ಫ್ರೌಢಶಾಲೆಯಲ್ಲಿ,ಸ್ಕೌಟ್ಸ್ ಗೈಡ್ಸ್ ಮೇಳ, ಕಬ್ಸ್ ಬುಲ್ ಬುಲ್ಸ್ ಉತ್ಸವ

ಬಂಟ್ವಾಳ: ಸ್ಕೌಟ್ಸ್ ಗೈಡ್ಸ್ ಮೇಳ, ಕಬ್ಸ್ ಬುಲ್ ಬುಲ್ಸ್ ಉತ್ಸವ ಪುದು ಗ್ರಾಮದ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬಂಟ್ವಾಳ, ಸರಕಾರಿ ಪ್ರೌಢಶಾಲೆ ಸುಜೀರು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತೆಂಗಿನ ಗಿಡಕ್ಕೆ ನೀರೆರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ತನ್ನ ರಾಜಕೀಯ ಜೀವನದ ಶಿಸ್ತು, ಸಂಯಮಗಳು ಸ್ಕೌಟ್ಸ್‌ನ ಕೊಡುಗೆಯಾಗಿದೆ. ವಿದ್ಯಾರ್ಥಿಯಾಗಿದ್ದಾಗ ಸ್ಕೌಟ್ಸ್‌ನಲ್ಲಿ ತೊಡಗಿಸಿಕೊಂಡ ಕಾರಣ ಜೀವನದಲ್ಲಿ ಎಂತಹ ಟೀಕೆ, ವಿರೋಧಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.ಸ್ಕೌಟ್, ಗೈಡ್ಸ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಜಾತಿ, ಧರ್ಮ, ಬಡವ, ಶ್ರೀಮಂತನೆನ್ನುವ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಅವಕಾಶಗಳು ಸಿಗಲಿವೆ. ತನ್ನ ಸೆಲ್ಪಿಯನ್ನು ತಾನೇ ತೆಗೆದು ಸೆಲ್ಫಿಶ್‌ಗಳಾಗುವ ಇಂದಿನ ಕಾಲಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸ್ಕೌಟ್, ಗೈಡ್ಸ್‌ಗಳಿಗೆ ಸೇರಿಸಿ ಸಮಾಜಕ್ಕೆ ಉತ್ತಮ ನಾಗರೀಕರನ್ನು ಕೊಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಸುಜೀರು ಪ್ರೌಢಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್ ಮಾತನಾಡಿ ಸಂವಿಧಾನದ ಆಶಯದಂತೆ ಭಾವೈಕ್ಯತೆಯ ಮೂಲಕ ದೇಶ ಕಟ್ಟುವ ಕಾರ್ಯ ಸ್ಕೌಟ್‌ಮತ್ತು ಗೈಡ್ಸ್ ಮೂಲಕ ನಡೆಯುತ್ತಿದೆ ಎಂದರು. ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಮಂಗಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ತುಂಬೆ, ಗುರುವ ಹಾಗೂ ಐತಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಪ್ರಮುಖರಾದ ಎಫ್ ಮಹಮ್ಮದ್ ಬಾವಾ, ಝಪ್ರುಲ್ಲಾ ಒಡೆಯರ್, ಕಿಶೋರ್ ಕುಮಾರ್, ಹುಸೈನ್, ಸಲಾಂ ಮಲ್ಲಿ, ಇಸ್ಮಾಯಿಲ್, ರತ್ನಾವತಿ, ನಂದಾ ಎಸ್ತೇರ ಹಾಜರಿದ್ದರು. ಸಭಾಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಧ್ವಜಾರೋಹಣ ನಡೆದು ಸಚಿವರು ಹಾಗೂ ಗಣ್ಯರು ಧ್ವಜವಂದನೆ ಸ್ವೀಕರಿಸಿದರು.

Related posts

Leave a Reply