Header Ads
Header Ads
Breaking News

ಬಂಟ್ವಾಳ:ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗ ದಂಪತಿ ವಿವಾಹ ರಜತ ಮಹೋತ್ಸವ

ಬಂಟ್ವಾಳ: ಬಂಟ್ವಾಳದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯಾದ ವಿಎನ್‌ಆರ್ ಗೋಲ್ಡ್ ಇದರ ಮಾಲಕರಾದ ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗ ದಂಪತಿ ವಿವಾಹ ರಜತ ಮಹೋತ್ಸವದ ಸಂಭ್ರಮ ಭಾನುವಾರ ಸಂಜೆ ಬಂಟ್ವಾಳ ಪೇಟೆಯ ಅವರ ನಿವಾಸದಲ್ಲಿ ನಡೆಯಿತು. 

ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡ ಮನೆ, ಸ್ಯಾಕ್ಸೋಪೋನ್ ವಾದ್ಯದ ಹಿಮ್ಮೇಳ, ಬಂಧು ಬಳಗದದವರ ಉಪಸ್ಥಿತಿಯಲ್ಲಿ ನಡೆದ ವೈವಾಹಿಕ ರಜತ ಸಂಭ್ರಮ ಇಪತ್ತೈದು ವರ್ಷಗಳ ಹಿಂದಿನ ವಿವಾಹ ದಿನವನ್ನು ಮತ್ತೆ ಮೆಲುಕು ಹಾಕುವಂತೆ ಸಡಗರದಿಂದ ನಡೆಯಿತು. ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಧಾರ್ಮಿಕ ವಿಧಿವಿಧಾನಗಗಳೊಂದಿಗೆ ನಡೆದ ವೈವಾಹಿಕ ಜೀವನದ ಬೆಳ್ಳಿ ಹಬ್ಬದಲ್ಲಿ ಪುರೋಹಿತ ವರ್ಗದವರು ದಂಪತಿಗಳನ್ನು ಹರಸಿದರು. ಇದೇ ಸಂದರ್ಭ ವಿಎನ್‌ಆರ್ ಗೋಲ್ಡ್‌ನ ಸಿಬ್ಬಂದಿಗಳಿಗೆ ಉಡುಗೊರೆ ನೀಡಲಾಯಿತು. ಕುಟುಂಬ ವರ್ಗದವರು, ಬಂಧು ಮಿತ್ರರು, ಸ್ನೇಹಿತರು ಬಾಳಿಗ ದಂಪತಿಗೆ ಶುಭಾಶಯ ಕೋರಿ ಹರಸಿದರು. ವಿ೪ ನ್ಯೂಸ್‌ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ದಂಪತಿ ಹಾಗೂ ರೋಸ್ಲಿನ್ ಅವರು ಉಪಸ್ಥಿತರಿದ್ದು ಬಾಳಿಗ ದಂಪತಿಗಳಿಗೆ ಶುಭ ಹಾರೈಸಿದರು.

Related posts

Leave a Reply