Header Ads
Header Ads
Breaking News

ಬಂಟ್ವಾಳ: ಅಪಾಯಕಾರಿಯಾಗಿ ಪರಿಣಮಿಸಿದ ರಾಷ್ಟ್ರೀಯ ಹೆದ್ದಾರಿ

ಬಿ.ಸಿ.ರೋಡಿನಲ್ಲಿ ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೆತುವೆ ಅಡಿಭಾಗದಲ್ಲಿ ಹಾಕಿರುವ ಜಲ್ಲಿಕಲ್ಲುಗಳೆಲ್ಲಾ ಎಲೆಂದರಲ್ಲಿ ಚದುರಿ ಹೋಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ಮೇಲ್ಸೆತುವೆಯಿಂದ ಮೊದಲ್ಗೊಂಡು ಸರ್ವಿಸ್ ರಸ್ತೆ, ಕಾಂಕ್ರೀಟ್ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಇದೀಗ ಸರ್ವಿಸ್ ರಸ್ತೆಯಲ್ಲಿ ಬಂದ ವಾಹನಗಳು ಮುಖ್ಯರಸ್ತೆಗೆ ತಿರುಗುವ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಜಲ್ಲಿ ಹಾಕಿ ಅದಕ್ಕೆ ಡಾಮಾರು ಹಾಕದೇ ಬಿಟ್ಟಿರುವುದರಿಂದ ಪಾದಾಚಾರಿಗಳ ಪ್ರಾಣಕ್ಕೆ ಕಂಟಕ ಎದುರಾಗಿದೆ.ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಉಂಟಾದ ಹೊಂಡಗಳನ್ನು ಡಾಮಾರು ಹಾಕಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದೇ ಸಂದರ್ಭ ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ತಿರುವು ಪಡೆಉಕೊಳ್ಳುವ ಮೇಲ್ಸೆತುವೆಯ ಅಡಿ ಭಾಗವನ್ನು ಅಗೆದು ಜಲ್ಲಿ ಹಾಕಿದೆ.

ಮುಂದೆ ಡಾಮಾರು ಹಾಕಿ ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಎನ್‍ಎಚ್‍ಎಐ ಸುಸಜ್ಜಿತಗೊಳಿಸುತ್ತಿದೆ ಎಂದೇ ಸಾರ್ವಜನಿಕರು ನಂಬಿದ್ದರು. ಆದರೆ ಕೇವಲ ಜಲ್ಲಿ ಹಾಕಿ ಹೋದ ಇಲಾಖೆ ಮತ್ತೆ ಇತ್ತೆ ತಲೆ ಹಾಕಿಯೂ ನೋಡಿಲ್ಲ. ಇದೀಗ ಜಲ್ಲಿ ಕಲ್ಲುಗಳೆಲ್ಲಾ ಸರ್ವಿಸ್ ರಸ್ತೆಯಲ್ಲಿ ಹರಡಿ ಕೊಂಡಿದೆ. ದ್ವಿಚಕ್ರ ವಾಹನಗಳು ಮತ್ತು ಪಾದಾಚಾರಿಗಳು ಹೋಗುವ ಸಂದರ್ಭದಲ್ಲಿ ಘನವಾಹನಗಳ ಚಕ್ರದಡಿಗೆ ಸಿಲುಕಿ ಜಲ್ಲಿಕಲ್ಲಿಗಳು ಎಸೆಯಲ್ಪಡುವುದರಿಂದ ಯಾವ ಕ್ಷಣ ಬೇಕದರೂ ಅಪಾಯ ಸಂಭವಿಸಬಹುದು. ಅಲ್ಲದೆ ಲಘು ವಾಹನ ಸವಾರರು ಇಲ್ಲಿ ವಾಹನ ಕೊಂಡೊಯ್ಯಲು ಹರ ಸಾಹಸ ಪಡುತ್ತಿದ್ದಾರೆ. ಡಾಮಾರು ಹಾಕದೇ ಕೇವಲ ಜಲ್ಲಿ ಹಾಕಿ ಜನರಿಗೆ ಯಾಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೊಂದರೆ ಕೊಡುತ್ತಿದೆ ಎಂದು ಇಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ.

Related posts

Leave a Reply