Header Ads
Header Ads
Breaking News

ಬಂಟ್ವಾಳ: ಅಯ್ಯಪ್ಪ ವೃತಧಾರಿ ಹೃದಯಾಘಾತದಿಂದ ಸಾವು.

ಅಯ್ಯಪ್ಪ ವೃತಧಾರಿ, ಕಾವಳಮೂಡೂರಿನ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚೆಂಗನ್ನೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಾವಳಕಟ್ಟೆ ನಿವಾಸಿ ಮುತ್ತಯ್ಯ ಭಂಡಾರಿಯವರ ಮಗ ಪೂವಪ್ಪ ಭಂಡಾರಿ (45) ಅವರು ಮೃತಪಟ್ಟ ರ್ದುದೈವಿಯಾಗಿದ್ದಾರೆ. ಅವಿವಾಹಿತರಾಗಿರುವ ಅವರು ಕಾವಳಮೂಡೂರು ಗ್ರಾಮ ಪಂಚಾಯತ್‌ನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸೋಮವಾರ ಏಕಾಂಗಿಯಾಗಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದು, ದೇವರ ದರ್ಶನ ಪಡೆದು ವಾಪಾಸು ಊರಿಗೆ ಬರಲು ಮಧಾಹ್ನ ಚೆಂಗನ್ನೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ತಲುಪುತ್ತಿದ್ದಂತೆ ಹೃದಯಾಘಾತಕ್ಕೊಳಗಾಗಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಅವರ ಚೀಲದಲ್ಲಿ ಪತ್ತೆಯಾದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಅವರ ಗುರುತು ಹಚ್ಚಿರುವ ರೈಲ್ವೆ ಅಧಿಕಾರಿಗಳು ಅವರ ಮನೆಗೆ ಸುದ್ದಿ ಮುಟ್ಟಿಸಿದ್ದಾರೆ. ಮೃತರು ತಾಯಿ, ತಂಗಿ ಹಾಗೂ ತಮ್ಮ ಅವರನ್ನು ಅಗಲಿದ್ದಾರೆ. ಮುಂದಿನ ಪ್ರಕ್ರಿಯೆಯ ಹಿನ್ನಲೆಯಲ್ಲಿ ಮನೆಮಂದಿ ಚೆಂಗನ್ನೂರಿಗೆ ತೆರಳಿದ್ದಾರೆ.

Related posts

Leave a Reply