Header Ads
Header Ads
Breaking News

ಬಂಟ್ವಾಳ : ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ನೂತನ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ಶಿಕ್ಷಣ ಸಂಸ್ಥೆ ಯನ್ನು ಸ್ಥಾಪಿಸುವುದು ಸುಲಭ, ಅದನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಆರಂಭದ ಹಂತದಲ್ಲಿ ಸ್ವಲ್ಪ ನಷ್ಟ ಉಂಟಾದರೂ ನಿರಂತರ ಪರಿಶ್ರಮ ದಿಂದ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಅವರು ಹೇಳಿದರು.

ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿಯ ಓಂ ಜನಹಿತಾಯ ಸಂಸ್ಥಾನ ಟ್ರಸ್ಟ್ ಸಂಸ್ಥೆಯ ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅತಿಥಿಯಾಗಿ ಮಾತನಾಡಿ, ಸ್ವಾತಂತ್ರ್ಯೋತ್ತರದ ಬಳಿಕ ದೇಶದಲ್ಲಿ ಬಹಳಷ್ಟು ಪ್ರಯತ್ನದ ನಂತರ ಸಂಪೂರ್ಣ ಸಾಕ್ಷರತೆ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಜವಾಬ್ದಾರಿ ಸರಕಾರದ್ದಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರಕಾರದ ಹೊರೆ ಕಡಿಮೆಯಾಗಿದೆ. ಇದಕ್ಕೆ ಜನಪರ ಹಿತಾಸಕ್ತಿಯ ನಿಟ್ಟೆ ವಿದ್ಯಾ ಸಂಸ್ಥೆ ಮಾದರಿಯಾಗಿದೆ. ಈ ಸಂಸ್ಥೆಯೂ ಅಂತಹ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಅರಳದ ಆಡಳಿತ ಮೊಕ್ತೇಸರ ಎ. ರಾಜೇಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಶಾಸಕ ಎನ್.ಎಂ.ಅಡ್ಯಂತಾಯ, ಟ್ರಸ್ಟಿ, ಮುಂಬಯಿ ವೈದ್ಯ ಡಾ| ಸತೀಶ್ ಶೆಟ್ಟಿ, ಟ್ರಸ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟು ಹರೀಶ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಶುಭ ಹಾರೈಸಿದರು.

ಶಾಲಾ ಸಂಸ್ಥಾಪಕ, ಮುಂಬಯಿ ಉದ್ಯಮಿ ಶಾಂತಾರಾಮ ಶೆಟ್ಟಿ, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಅರಳ ಗ್ರಾ.ಪಂ. ಅಧ್ಯಕ್ಷೆ ತುಂಗಮ್ಮ, ಟ್ರಸ್ಟಿಗಳಾದ ಅರುಣಾ ಶೆಟ್ಟಿ, ಭಾಸ್ಕರ ಶೆಟ್ಟಿ, ವಿಶ್ವನಾಥ ಶೆಟ್ಟಿ,ಅತಿತಾ ಶೆಟ್ಟಿ, ವನಿತಾ ಶೆಟ್ಟಿ, ಮನ್ಸೂರ್ ಸಾಹು, ಪ್ರಮುಖರಾದ ಪುಷ್ಪಾ ಶೆಟ್ಟಿ ಕುಂಜಾರು, ವೀಣಾ ಶೆಟ್ಟಿ , ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಗ್ರಾ.ಪಂ.ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *