Header Ads
Breaking News

ಬಂಟ್ವಾಳ ಕಾಂಗ್ರೆಸ್ ಪಕ್ಷದ ವತಿಯಿಂದ ಅಸಂವಿಧಾನಿಕ ರಾಷ್ಟ್ರೀಯ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಬಂಟ್ವಾಳ: ಬಂಟ್ವಾಳ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಅಸಂವಿಧಾನಿಕ ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಬಿ.ಸಿ.ರೋಡ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮನಾಥ ರೈ ಅವರು,ಜಾತ್ಯಾತೀತರನ್ನು ಅವಹೇಳನ ಮಾಡುವ ಕಾರ್ಯ ನೋವು ತರುತ್ತದೆ. ಮನುಷ್ಯ ಪ್ರೀತಿ ಮಾಡುವವರನ್ನು ಅಪಮಾನ ಮಾಡಲಾಗುತ್ತಿದೆ. ನರೇಂದ್ರ ಮೋದಿಯ ನೀತಿಗಳು ಸರಿ ಇಲ್ಲ. ಶ್ರೀಮಂತರ, ಬಂಡವಾಳಶಾಹಿಗಳ ಪರ ಸರಕಾರ ಇದೆ. ಅವರ ಸಾಲ ಮನ್ನಾ ಮಾಡಲಾಗಿದೆ ಎಂದರು.

ಪಕ್ಷದ ಮುಖಂಡ ಸುಧೀರ್ ಕುಮಾರ್ ಕೊಪ್ಪ ಮಾತನಾಡಿ, ಒಟ್ಟಾಗಿ ಬದುಕಬೇಕು ಎಂಬ ಚಿಂತನೆಯನ್ನು ರಾಷ್ಟ್ರ ಮಾಡುತ್ತಿದ್ದರೆ, ಅದನ್ನು ಒಡೆಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಒಡೆದು ಆಳುತ್ತಿರುವ ನೀತಿಯನ್ನು ಬ್ರಿಟೀಷರ ನೀತಿ ಮುಂದುವರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೊಡ್ಡ ಸಮುದಾಯವನ್ನು ಹೊರಗಿಡುವ ಮೂಲಕ ಒಡೆಯುವ ಕಾರ್ಯ ನಡೆಸುತ್ತಿದೆ. ಆರ್ಥಿಕ ಹಿಂಜರಿತ ಮುಚ್ಚಲು ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದರು.ಈ ಸಂದರ್ಭ ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಸೇರಿದಂತೆ ಕಾಂಗ್ರೆಸ್‌ನ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *