Header Ads
Breaking News

ಬಂಟ್ವಾಳ ಕಾಮಾಜೆ ಕ್ರಾಸ್ ಶೌಚಗುಂಡಿ ನಿರ್ಮಾಣ : ವಿ4 ನ್ಯೂಸ್ ಇಂಪ್ಯಾಕ್ಟ್

ಬಂಟ್ವಾಳ: ತಾಲೂಕಿನ ಬಂಟ್ವಾಳ ಬೈಪಾಸ್ ರಸ್ತೆಯ ಕಾಮಾಜೆ ಕ್ರಾಸ್ ಬಳಿ ಇರುವ ಕುಡಿಯುವ ನೀರಿನ ರೇಚಕ ಸ್ಥಾವರದ ಶೌಚಾಗೃಹಕ್ಕೆ ಶೌಚಗುಂಡಿ ನಿರ್ಮಾಣಗೊಳ್ಳುತ್ತಿದೆ. ಶೌಚಗುಂಡಿ ಇಲ್ಲದೆ ನಿಷ್ಪ್ರಯೋಜಕ ಶೌಚಾಲಯ ನಿರ್ಮಿಸಿರುವ ಬಗ್ಗೆ ವಿ4 ನ್ಯೂಸ್ ಶೌಚಗುಂಡಿ ಇಲ್ಲದ ಶೌಚಾಲಯ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಎಚ್ಚೆತ್ತುಕೊಂಡಿರುವ ಇಲಾಖೆ ಇದೀಗ ಶೌಚಾಗೃಹದ ಗುಂಡಿ ಸಿದ್ಧಪಡಿಸುತ್ತಿದೆ. ಕ.ನ.ನೀ.ಸ.ಮತ್ತು ಒಳಚರಂಡಿ ಮಂಡಳಿ ವತಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕಾಮಾಜೆ ಕ್ರಾಸ್ ಬಳಿ ರೇಚಕ ಸ್ಥಾವರವನ್ನು ನಿರ್ಮಿಸಿದೆ. ಇದರ ಹಿಂಭಾಗದಲ್ಲಿ ಶೌಚಾಗೃಹವನ್ನು ನಿರ್ಮಿಸಿದ್ದರೂ ಅದಕ್ಕೆ ಶೌಚಗುಂಡಿ ಇಲ್ಲದೆ ನಿಷ್ಪ್ರಯೋಜಕವಾಗಿತ್ತು. ಇತ್ತೀಚೆಗೆ ಬಂಟ್ವಾಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಒಳಚರಂಡಿ ಮಂಡಳಿಯ ಎಲ್ಲಾ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಒಂದು ತಿಂಗಳೊಳಗಾಗಿ ಲೋಪದೋಷಗಳನ್ನು ಸರಿಪಡಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪುರಸಭೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದರು. ಅದರಂತೆ ಗುಂಡಿ ಇಲ್ಲದ ಶೌಚಾಗೃಹಕ್ಕೂ ಶೌಚಗುಂಡಿ ಸಿಕ್ಕಿದೆ.

Related posts

Leave a Reply

Your email address will not be published. Required fields are marked *