Header Ads
Breaking News

ಬಂಟ್ವಾಳ ಕುಲಾಲ ಸುಧಾರಕ ಸಂಘದ ವತಿಯಿಂದ ತಹಶೀಲ್ದಾರ್‌ಗೆ ಮನವಿ

ಬಂಟ್ವಾಳ: ಇತ್ತೀಚೆಗೆ ಅಡ್ಯಾರಿನ ಕಣ್ಣೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯವನ್ನು ಅವಹೇಳನ ಮಾಡುವ ರೀತಿಯ ಪೋಸ್ಟರ್ ಪ್ರದರ್ಶಿಸಿದ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ತಹಶೀಲ್ದಾರ್ ಹಾಗೂ ಬಂಟ್ವಾಳ ನಗರ ಠಾಣೆಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಕುಂಬಾರನಿಗೆ ವರ್ಷ ಹರ್ಷನಿಗೆ ನಿಮಿಷ ಎಂಬ ಬರವಣಿಯ ಪೋಸ್ಟರ್ ಪ್ರದರ್ಶಿಸಿ ಗಾದೆಯನ್ನು ತಿರುಚಿ ಕುಂಬಾರ ಸಮುದಾಯಕ್ಕೆ ಅವಮಾನಗೈಯ್ಯಲಾಗಿದೆ, ಕುಂಬಾರ ಸಮುದಾಯದ ಸ್ವಾಭಿಮಾನಕ್ಕೆ ಕುಂದುಂಟು ಮಾಡಿದ ಪ್ರತಿಭಟನೆಯ ಸಂಘಟಕರು ಹಾಗೂ ಬಿತ್ತಿಪತ್ರ ಹಿಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ರವಿರಾಜ್ ಬಿ.ಸಿ.ರೋಡು, ರಮೇಶ್ ಸಾಲ್ಯಾನ್ ಕೈಕುಂಜೆ, ಜಯಂತ್ ವಗ್ಗ, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ಸತೀಶ್ ಪಲ್ಲಮಜಲು, ರಮೇಶ್ ಸಾಲ್ಯಾನ್ ಸಂಚಯಗಿರಿ, ಸೋಮನಾಥ ಸಾಲ್ಯಾನ್, ರಾಮಣ್ಣ, ಕೃಷ್ಣಶ್ಯಾಮ್, ಉಮೇಶ್, ಸತೀಶ್ ಜಕ್ರಿಬೆಟ್ಟು, ಚೇತನ್, ಗಣೇಶ್ ಮರ್ದೋಳಿ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *